ಅಖಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ನೂತನ ಸಮಿತಿ ಉದ್ಘಾಟನೆ…
ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ನೂತನ ಸಮಿತಿಯ ವಿಧ್ಯುಕ್ತ ಕಾರ್ಯಾರಂಭ ಹಾಗೂ ಉದ್ಘಾಟನಾ ಸಮಾರಂಭವು ಆ. 13 ರಂದು ಶ್ರೀ ಸರಸ್ವತೀ ವಿದ್ಯಾಲಯ ಕನ್ಯಾನದಲ್ಲಿ ನೆರವೇರಿತು.
ಚಿಣ್ಣರಿಂದ ದೇಶಭಕ್ತಿ ಗೀತೆಗಳ ಸಂಗೀತ ರಸಮಂಜರಿ ಹಾಗೂ ಪ್ರಾರ್ಥನೆ ನಡೆದ ನಂತರ ನೂತನ ಸದಸ್ಯರ ನಾಮಾಂಕನ ಹಾಗೂ ಜವಾಬ್ದಾರಿ ಘೋಷಿಸಿದ ಕಾರ್ಯಕರ್ತ ಶ್ರೀ ಶೈಲೇಶ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಸರ್ವ ಸದಸ್ಯರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ನಿಯೋಜನೆ ಗೊಂಡ ಡಾ ಸುರೇಶ ನೆಗಳಗುಳಿ,ಉಪಾಧ್ಯಕ್ಷೆ ಪಲ್ಲವಿ ಕಾರಂತ್, ಕಾರ್ಯದರ್ಶಿ ಮಾನಸಾ ಕೈಂತಜೆ,ಸಹ ಕಾರ್ಯದರ್ಶಿ ಅಶೋಕ ಕಲ್ಯಟೆ, ಕೋಶಾಧಿಕಾರಿ ಪ್ರಶಾಂತ್ ಕಡ್ಯ ಮತ್ತು ಸದಸ್ಯರಾಗಿ ಪೂರ್ವಾಧ್ಯಕ್ಷ ಜಯಾನಂದ ಪೆರಾಜೆ,ಅಶೋಕ್ ಕಡೆ ಶಿವಾಲ್ಯ, ರಮೇಶ್ ಬಾಯಾರ್,ಅಶ್ವತ್ಥ ಬರಿಮಾರು,ಜಯರಾಮ ಪಡ್ರೆ,ವಿಶ್ವನಾಥ್ ಕುಲಾಲ್,ಸೀತಾಲಕ್ಷ್ಮಿ ವರ್ಮಾ, ಕುಮಾರಸ್ವಾಮಿ ಕನ್ಯಾನ,ಈಶ್ವರ ಪ್ರಸಾದ್ ಕನ್ಯಾನ,ಚಂದ್ರಶೇಖರ ಕೈಯಾಬೆ, ಶ್ರೀಮತಿ ಸೌಮ್ಯ ಕಲ್ಲಡ್ಕ,ಅನಂತ ರಾಮ ಹೇರಳೆ,ವಿಠಲ ಪಾಂಡವರ ಕಲ್ಲು,ಅಶೋಕ ಬರಿಮಾರು,ಬಾಲಕೃಷ್ಣ ಕೇಪುಳು,ರೇಮಂಡ್ ಡಿ ಕುನ್ಹಾ ಹಾಗೂ ಡಾ ವಾಣಿಶ್ರೀ ಯವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು
ರಾಜ್ಯ ಕಾರ್ಯದರ್ಶಿ ಡಾ|| ಮಾಧವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಶುಭಾವಸರದಲ್ಲಿ ದ.ಕ ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿಯವರು ಮುಖ್ಯ ಅತಿಥಿಗಳಾಗಿದ್ದರು
ಪೂರ್ವಾಧ್ಯಕ್ಚ ಜಯಾನಂದ ಪೆರಾಜೆಯವರು ಸ್ವಾಗತ ಭಾಷಣ ಹಾಗೂ ಪ್ರಸ್ತಾವನೆ ಮಾಡಿದರು. ಡಾ ಸುರೇಶ ನೆಗಳಗುಳಿ ಸಮಿತಿಯ ಯೋಜನೆಗಳ ಪಕ್ಷಿನೋಟ ಬೀರಿದರು. ತಾರಾನಾಥ ಕೊಟ್ಟಾರಿಯವರು ನಮ್ಮ ದೇಶೀಯ ಸಂಸ್ಕೃತಿಗಳ ಅನಾವರಣದ ಅಗತ್ಯವನ್ನು ಒತ್ತಿ ಹೇಳಿದರು.
ಅಧ್ಯಕ್ಷರ ನುಡಿಯಲ್ಲಿ ಡಾ ಮಾಧವ ಅವರು ಪರಿಷತ್ತಿನ ಇತಿಹಾಸ,ಉದ್ದೇಶ,ಸರಳತೆ ಮತ್ತು ಸೇವೆಗಳ ವೈಖರಿಯನ್ನು ವಿಶ್ಲೇಷಣೆ ಮಾಡಿದರು
ಪ್ರಾಯೋಜಕ ಸಂಸ್ಥೆಯ ಮುಖ್ಯಸ್ಥರಾದ ಈಶ್ವರ ಪ್ರಸಾದ್ ಕನ್ಯಾನ ಅವರು ಧನ್ಯವಾದ ಸಮರ್ಪಣೆ ಗೈಯುತ್ತಾ ಸದುದ್ದೇಶದ ಇಂಥ ಕಾರ್ಯಕ್ರಮಗಳಗೆ ಸದಾ ತನ್ನ ಬೆಂಬಲವಿದೆ ಎಂದರು.ಬಳಿಕ ಕವಿಗೋಷ್ಠಿ- ಹಾಗೂ ವಾಣಿಶ್ರೀ ತಂಡದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವರದಿ: ಡಾ ಸುರೇಶ ನೆಗಳಗುಳಿ