ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಮಳೆಕೊಯ್ಲು ಘಟಕ ಉದ್ಘಾಟನೆ…

ಕೊಡಗು: ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಮಳೆಕೊಯ್ಲು ಘಟಕವನ್ನು ಆ.21 ರಂದು ಉದ್ಘಾಟಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಲ. ವಾಸುದೇವ ಅವರ ಮನೆಯಲ್ಲಿ ನಿರ್ಮಿಸಿದ ಮಳೆ ಕೊಯ್ಲು ಘಟಕವನ್ನು ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷರಾದ ಲ.ಸಂದ್ಯಾ ಸಚಿತ್ ರೈ ರವರು ಉದ್ಘಾಟಿಸಿದರು.
ಲ. ಪ್ರಶಾಂತ್ ರವರು ಮಳೆ ಕೊಯ್ಲಿನ ಪ್ರಾಮುಖ್ಯತೆ ಮತ್ತು ಪ್ರಾತ್ಯಕ್ಷಿತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ಸ್ಥಾಪಕ ಸದಸ್ಯರಾದ ಲ. ದೇವಿಪ್ರಸಾದ್, ಲ. ಸಚಿತ್ ಕುಮಾರ್ ರೈ ಹಾಗೂ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ನಿಕಟಪೂರ್ವ ಅಧ್ಯಕ್ಷರು ಹಾಗೂ ಇತರ ಎಲ್ಲಾ ಸದಸ್ಯರು ಭಾಗವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button