ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಉದ್ಘಾಟನೆ…
ಪಾವಂಜೆ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಉದ್ಘಾಟನೆ ಅ.26 ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ನಾಗವೃಜ ಕ್ಷೇತ್ರ ದಲ್ಲಿ ನಡೆಯಿತು.
ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ದೀಪ ಪ್ರಜ್ವಲನೆ ಮೂಲಕ ನೂತನ ಯಕ್ಷಗಾನ ಮಂಡಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕೇವಲ ಒಂದು ತಿಂಗಳಲ್ಲಿ ಮೇಳ ಆರಂಭಗೊಂಡಿದೆ. ಮೇಳಕ್ಕೆ ಬೇಕಾದ ಎಲ್ಲಾ ಪರಿಕರಗಳು,ಸೌಲಭ್ಯಗಳು ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ. ಶ್ರೀ ಸುಬ್ರಮಣ್ಯ ಸ್ವಾಮಿಯ ಆಶೀರ್ವಾದವೇ ಇದಕ್ಕೆ ಕಾರಣ ಎಂದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪಟ್ಲ ಸತೀಶ್ ಶೆಟ್ಟಿ ಅವರ ತಂದೆ ಪಟ್ಲ ಮಹಾಬಲ ಶೆಟ್ಟಿ, ಪೋಷಕರಾದ ಶಶಿಧರ್ ಶೆಟ್ಟಿ ಬರೋಡ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ದುರ್ಗಾಪ್ರಸಾದ್ ಪಡುಬಿದ್ರಿ, ಡಾ.ಮನು ರಾವ್, ಸುದೇಶ್ ಕುಮಾರ್ ರೈ, ಸುಧಾಕರ ಆಚಾರ್ಯ, ಪುರುಷೋತ್ತಮ ಭಂಡಾರಿ, ನಿತೇಶ್ ಶೆಟ್ಟಿ ಎಕ್ಕಾರು, ಯಕ್ಷರಂಗದ ಗಣೇಶ್ ಕೊಲಕಾಡಿ, ದಾಮೋದರ ಕಟೀಲ್, ವಿನೋದ್ ಸಾಲ್ಯಾನ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಶಂಭವಿ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.