ಕೊರೊನ ಮತ್ತು ರಾಜಕೀಯ- ಅಮೆರಿಕಾದ ಹಾದಿಯಲ್ಲಿ ಭಾರತ…ವೆಂಕಪ್ಪ ಗೌಡ ಅಭಿಪ್ರಾಯ…
ಸುಳ್ಯ: ಕೊರೊನ ಮತ್ತು ರಾಜಕೀಯದ ವಿಷಯದಲ್ಲಿ ನಾವು ಅಮೇರಿಕ ದೇಶದ ಹಾದಿಯಲ್ಲೇ ಸಾಗುತ್ತಿದ್ದೇವೆಯೇ ಎಂಬ ಜಿಜ್ಞಾಸೆ ಈಗ ದೇಶದ ಜನರಲ್ಲಿ ಮೂಡುತ್ತಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80 ಲಕ್ಷ ಕ್ಕಿಂತಲೂ ಹೆಚ್ಚು ಇದ್ದರೆ ನಮ್ಮ ದೇಶದಲ್ಲಿ ಕೂಡ ಸೋಂಕಿತರ ಸಂಖ್ಯೆ 71 ಲಕ್ಷ ದಾಟಿದೆ. ಕೊರೊನದಿಂದಾಗಿ ಸಾವಿಗೀಡಾದವರ ಸಂಖ್ಯೆ 1.9 ಲಕ್ಷ. ನಮ್ಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ . ಮರಣ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚಾಗಿದ್ದು ದೇಶದಲ್ಲಿ ಒಂದನೇ ಸ್ಥಾನಕ್ಕೆ ತಲುಪಿದ್ದೇವೆ. ಇನ್ನೂ ಈ ದೇಶದಲ್ಲಿ ಎಷ್ಟು ಜನ ಈ ರೋಗಕ್ಕೆ ತುತ್ತಾಗಬೇಕೋ? ಎಷ್ಟು ಜನರು ಸಾಯಬೇಕೋ ಗೊತ್ತಿಲ್ಲ . ಅದರೆ ನಮ್ಮ ಸರಕಾರಗಳು ಈ ಬಗ್ಗೆ ಲಘವಾಗಿ ತೆಗೆದುಕೊಂಡು ದಿನ ಕಳೆಯುವುದನ್ನು ನೋಡಿದರೆ ಶೀಘ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾ ದೇಶವನ್ನು ಹಿಂದಿಕ್ಕಿದರೂ ಆಶ್ವರ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶದ ಜನರ ಜೀವರಕ್ಷಣೆ ಮಾಡಲು ಅಸಾಧ್ಯವಾದ ಅಮೆರಿಕಾ ದೇಶದಲ್ಲಿ ರಾಜಕೀಯ ಧ್ರುವೀಕರಣ ಪ್ರಾರಂಭವಾಗಿದ್ದು, ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಈಗಿನ ಅಧ್ಯಕ್ಷ ಟ್ರಂಪ್ ಸೋಲುವ ಎಲ್ಲಾ ಸಾಧ್ಯತೆ ಜಾಸ್ತಿಯಿದೆ ಎಂಬ ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಹೊರಬಿದ್ದಿದೆ. ಅದರಂತೆ ನಮ್ಮ ರಾಜ್ಯ ಹಾಗು ದೇಶದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣ ದ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದೂ ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.