ಸುದ್ದಿ

ಬಂಟ್ವಾಳ-ಪ್ರಾಕೃತಿಕ ವಿಕೋಪದ ಪರಿಹಾರದ ಚೆಕ್‍ಗಳ ವಿತರಣೆ…

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಾಕೃತಿಕ ವಿಕೋಪದ ಪರಿಹಾರದ ಚೆಕ್‍ಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಮ್ಮ ಕಚೇರಿಯಲ್ಲಿ ವಿತರಿಸಿದರು.
ಪಾಣೆಮಂಗಳೂರು, ಬಂಟ್ವಾಳ ,ವಿಟ್ಲ ಹೋಬಳಿಯ ಒಟ್ಟು ರೂ.10,97,000 ಚೆಕ್‍ಗಳನ್ನು ಶಾಸಕರು ಸಂತ್ರಸ್ತರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರು,ಪ್ರಭಾಕರ ಪ್ರಭು, ಗೀತಾ ಚಂದ್ರಶೇಖರ ಪೂಜಾರಿ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳ್ಯ, ನವೀನ್ ಬೆಂಜನಪದವು, ಗ್ರಾಮಕರಣೀಕರಾದ ಪ್ರದೀಪ್, ಯಶ್ವಿತ, ಕರಿಬಸಪ್ಪ, ಮಂಜುನಾಥ್, ನಿಶ್ಮಿತ, ಪ್ರಶಾಂತ್ ಕನ್ಯಾನ, ಸುರಕ್ಷಾ, ಪ್ರಶಾಂತ್ ಮಂಚಿ, ಚೆನ್ನಬಸಪ್ಪ ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button