ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮ ದಿನಾಚರಣೆ – ಭಜನಾ ಸೇವೆ…

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ- ಬಂಟ್ವಾಳ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮ ದ ಅಂಗವಾಗಿ ಸೆ.26 ರಂದು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಬಿಸಿರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಭಜನಾ ಸೇವೆ ಕಾರ್ಯಕ್ರಮ ನಡೆಯಿತು.
ಭಜನಾ ಕಾರ್ಯಕ್ರಮಕ್ಕೆ ಶಾಸಕಾಂಗವು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಳಿಕ ಶಾಸಕರು ಭಜನಾ ತಾಳವನ್ನು ತಂಡದ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು.
ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೊಳಲಿ ರಾಜರಾಜೇಶ್ವರಿ ಭಜನಾ ತಂಡದ ಜೊತೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಭಜನೆ ಹಾಡಿದರು. ಈ ತಂಡದ ಭಜನೆಯ ನಿಗದಿತ ಸಮಯದವರೆಗೂ ಸುಮಾರು ಒಂದುವರೆ ತಾಸುವರೆಗೆ ಶಾಸಕರು ಭಜನೆಯನ್ನು ಹಾಡಿದರು.ಪ್ರಾತಃಕಾಲ 6 ಗಂಟೆಗೆ ಸರಿಯಾಗಿ ಭಜನಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 8 ನೂತನ ಮಹಾಶಕ್ತಿ ಕೇಂದ್ರ ಗಳ ಆಯ್ದ ಭಜನಾ ತಂಡಗಳು ಈ ಅಖಂಡ ಭಜನಾ ಸೇವೆಯಲ್ಲಿ ಭಾಗವಹಿಸಿದವು.
ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಶ್ರೀ ರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಮೋದಿಯವರ ಆರೋಗ್ಯಕ್ಕೆ ರಕ್ಷಣೆ ನೀಡಲಿ, ಅಧಿಕಾರತ್ವ ಇನ್ನಷ್ಟು ಬಲಿಷ್ಠವಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿದರು.
ಭಜನಾ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಯುಮೋರ್ಚಾ ಅಧ್ಯಕ್ಷ ಪ್ತದೀಪ್ ಅಜ್ಜಿಬೆಟ್ಟು, ಬಂಟ್ವಾಳ ಬಿಜೆಪಿ ಕೋಶಾಧಿಕಾರಿ ಪ್ರಕಾಶ್ ಅಂಚನ್, ಪ್ರಮುಖರದ ಗೋಪಾಲ ಸುವರ್ಣ, ಜನಾರ್ದನ ಬೊಂಡಾಲ, ವೆಂಕಟೇಶ ನಾವುಡ ಪೊಳಲಿ ಉಮೇಶ್ ಪೂಜಾರಿ ಅರಳ , ಮನೋಜ್ ಕಳ್ಳಿಗೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರಕುಶಲ ವಸ್ತುಗಳ ಮಳಿಗೆ , ನಮೋ ಆ್ಯಪ್, ನಮೋ ಟಿ ಸ್ಟಾಲ್, ಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.

Sponsors

Related Articles

Back to top button