ಬಂಟ್ವಾಳ ಬಿಜೆಪಿ ಎಸ್.ಟಿ.ಮೋರ್ಚಾದ ವತಿಯಿಂದ ಜನಕಲ್ಯಾಣ ಸಮಾವೇಶ…

ಬಂಟ್ವಾಳ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೂಕ್ತ ಸ್ಥಾನಮಾನ ದೊರೆಯಬೇಕೆನ್ನುವ ಬಿಜೆಪಿ ಸಂಸ್ಥಾಪಕರ ಪರಿಕಲ್ಪನೆ‌ ಇಂದು ಸಾಕಾರಗೊಳ್ಳುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿಯ ಎಸ್.ಟಿ.ಮೋರ್ಚಾದ ವತಿಯಿಂದ ಬಿಸಿರೋಡಿನ‌ ಗೀತಾಂಜಲಿ‌ ಸಭಾಂಗಣದಲ್ಲಿ ನಡೆದ ಜನಕಲ್ಯಾಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕಟ್ಟುವ ಗುರಿಯೊಂದಿಗೆ ಶ್ರಮಿಸುವ ಬಿಜೆಪಿ ಎಲ್ಲಾ ವರ್ಗದವರ ಹಿತಾಸಕ್ತಿಯನ್ನು ಹೊಂದಿದೆ, ಆದರೆ ಕಾಂಗ್ರೇಸ್ ಕೇವಲ ಒಂದು‌ ಕುಟುಂಬ ಕೇಂದ್ರೀತ ರಾಜಕಾರಣ‌ ನಡೆಸುತ್ತಿದೆ ಎಂದರು. ಹೀಗಾಗಿ‌ ದೇಶದ ಬಗ್ಗೆ ಅಭಿಮಾನ ಇರಿಸಿಕೊಂಡ‌ ಎಸ್.ಟಿ. ಸಮುದಾಯದ ಶೇ. 95 ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಬಂಟ್ವಾಳ‌ ಎಸ್.ಟಿ.ಮೋರ್ಚಾದ ಅಧ್ಯಕ್ಷರಾದ ರಾಮನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಬಿಜೆಪಿ‌ ಸರ್ಕಾರಗಳು ಎಸ್.ಟಿ.ಯವರ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳು ಸಮಾಜಕ್ಕೆ ಶಕ್ತಿ ತುಂಬಿದೆ ಎಂದರು.
ಎಸ್ ಟಿ ಮೋರ್ಚಾದ ಪ್ರಭಾರಿ ಜಯಶ್ರೀ ಕರ್ಕೇರ ಮಾತನಾಡಿ, ಈ ಹಿಂದಿನ ಯಾವುದೇ ಸರ್ಕಾರಗಳು ಎಸ್.ಟಿ. ಸಮುದಾಯ ಕ್ಕೆ ನೀಡದಷ್ಟು ಯೋಜನೆಗಳನ್ನು ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿವೆ ಎಂದರು.
ಜಿಲ್ಲಾ‌ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಂಟ್ವಾಳ ಮಂಡಲ‌ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಎಸ್.ಟಿ. ಮೋರ್ಚಾದ ಅಧ್ಯಕ್ಷ ‌ಚೆನ್ನಕೇಶವ ಅರಸಮಜಲು , ರಾಮದಾಸ್ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಸುಮಿತ್ರಾ ಕರಾಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಠಲ ಸ್ವಾಗತಿಸಿದರು.

Sponsors

Related Articles

Back to top button