ಸುದ್ದಿ

ವಿದಾಯಕೂಟ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಇಲ್ಲಿ ಎರಡೂವರೆ ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ ಜಯರಾಮಶೆಟ್ಟಿ ಇವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಪ್ರಾಧ್ಯಾಪಕ ವರ್ಗ, ವಿದ್ಯಾರ್ಥಿಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಶ್ರೀಕಾಂತ್ ಶೆಟ್ಟಿ ಸಂಕೇಶ ವಹಿಸಿದ್ದರು. ಪ್ರಾಚಾರ್ಯರು ಸಂಸ್ಥೆಗೆ ನೀಡಿದ ಸೇವೆಯನ್ನು ಸುಬ್ರಹ್ಮಣ್ಯಬಟ್ ಮಂಜಿ ನಡ್ಕ, ಬರ್ಕೆ ಮಹಾಬಲ ರೈ, ಕೆ ಸುರೇಶ್ ಶೆಟ್ಟಿ ,ಉಪನ್ಯಾಸಕರಾದ ಅಂತಹ ಭಾರತಿ, ನಿವೃತ್ತ ಉಪನ್ಯಾಸಕಿ ಉಷಾಕಿರಣ್ ಜಯಲಕ್ಷ್ಮಿ, ಪ್ರಾಂಶುಪಾಲರಾದ ಬಾಬು ಗಾoವ್ಕರ್ ಸ್ಮರಿಸಿದರು. ಪುಷ್ಪ, ರಾಜೀವಿ, ವಿಶ್ವನಾಥ ಕೊಟ್ಟಾರಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ವಿಷ್ಣುಮೂರ್ತಿ ಮಯ್ಯ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ವಾಸುದೇವಬೆಳ್ಳೆ ನಿರ್ವಹಿಸಿದರು. ಉಪನ್ಯಾಸಕಿ ಸುಂದರಿ ಧನ್ಯವಾದ ನೀಡಿದರು, ಸನ್ಮಾನ ಪತ್ರವನ್ನು ಉಪನ್ಯಾಸಕಿ ಗಾಯತ್ರಿ ವಾಚಿಸಿದರು.

Related Articles

Leave a Reply

Your email address will not be published.

Back to top button