ಅರಂತೋಡು ತೆಕ್ಕಿಲ್ ಪ್ರತಿಷ್ಠಾನದಿಂದ 18 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ…

ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 18ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟವು ಎ.19 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ರಾದ ಟಿ.ಎಂ ಶಾಹಿದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ದುವಾ ನೆರವೇರಿಸಿದರು. ಪವಿತ್ರವಾದ ರಂಝಾನ್ ತಿಂಗಳ 28ರ ಉಪವಾಸ ದಿವಸದಂದು ನಡೆದ ಇಫ್ತಾರ್ ಕೂಟದಲ್ಲಿ ಸರ್ವಧರ್ಮದ ಅನೇಕ ಮಂದಿ ಪಾಲ್ಗೊಂಡರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಕೃಷ್ಣಪ್ಪ ಮಾತನಾಡಿ ಮುಸಲ್ಮಾನ ಬಾಂಧವರು ಒಂದು ತಿಂಗಳು ಉಪವಾಸ ಮಾಡುವುದರ ಜೊತೆಗೆ ತಮ್ಮ ಸಂಪಾದನೆಯ ಲಾಭಾಂಶದಲ್ಲಿ ಶೇ.2.5 ರಂತೆ ಬಡಬಗ್ಗರಿಗೆ ದಾನ ಮಾಡುವುದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಾರೆ. ಎಲ್ಲರು ಬಡವರ ಬಗ್ಗೆ ಕಾಳಜಿ ವಹಿಸಲು ಅವರು ಮನವಿ ಮಾಡಿದರು. ಸುಳ್ಯದ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಾಫ ಮಾತನಾಡಿ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಕಳೆದ ಎರಡುವರೆ ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಿಂದ ತೊಡಗಿಸಿಕೊಂಡು ಒಬ್ಬ ಜನಾನುರಾಗಿ ನಾಯಕರಾಗಿದ್ದಾರೆಂದರು. ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ.ಸಿ. ಜಯರಾಮ,ಭಾರತೀಯ ಯುವಕ ಕಾಂಗ್ರೇಸ್ ಸುಳ್ಯ ವಿಧಾನ ಸಭಾ ಕ್ಷೇತ್ರದ ವೀಕ್ಷಕ ಕಮಲ್ ಜಿತ್ ಮಾತನಾಡಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಎಲ್ಲಾ ಜಾತಿ ಮತ ಪಕ್ಷ ಭೇದ ಇಲ್ಲದೆ ನಮ್ಮ ಕುಟುಂಬ ಸಂಸ್ಥೆ ನಡೆಸುತ್ತಿರುವ ಸೌಹಾರ್ದ ಕಾರ್ಯಕ್ರಮ ಪರಿಸರದ ತೊಡಿಕಾನದ ದೇವಸ್ಥಾನ, ಮಸೀದಿ, ಮದರಸ, ಭಜನಾ ಮಂದಿರ, ಚರ್ಚ್ ಎಲ್ಲ ಕಡೆಗಳಲ್ಲೂ ಕಾರ್ಯಕ್ರಮಗಲಿದೆ ಎಂದರು.ವೇದಿಕೆಯಲ್ಲಿ ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ ಕಲ್ಲುಗುಂಡಿ, ಸುಳ್ಯ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಎಸ್. ಸಂಶುದ್ದೀನ್, ನಿವೃತ್ತ ಅಧ್ಯಾಪಕ ದಾಮೋದರ ಮಾಸ್ಟರ್, ಡಾ| ಹರ್ಷವರ್ದನ್ ಕುತ್ತಮೊಟ್ಟೆ, ಸುಳ್ಯ ವೆಂಕಟ್ರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬೂಸಾಲಿ ಗೂನಡ್ಕ, ತಾಜ್ ಮಹಮ್ಮದ್ ಸಂಪಾಜೆ, ಎ.ಕೆ ಇಬ್ರಾಹಿಂ ಕಲ್ಲುಗುಂಡಿ, ಪ್ರತಿಷ್ಠಾನದ ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಎನ್.ಎಸ್.ಯು ಸುಳ್ಯ ಬ್ಲಾಕ್ ಅಧ್ಯಕ್ಷ ಕೀರ್ತನ್ ಕೊಡಪಾಲ ಜಾಲ್ಸೂರ್, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಅಡ್ಕಾರ್, ಉನೈಸ್ ಪೆರಾಜೆ, ಸಿದ್ದೀಕ್ ಕೊಕ್ಕೋ, ಹನೀಫ್ ಸಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಯು. ಚಿದಾನಂದ ಗೂನಡ್ಕ, ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜನಾರ್ದನ ಇರ್ಣೆ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಪಠೇಲ್ ಚಾರಿಟೇಬಲ್ ಅಧ್ಯಕ್ಷ ಬದುರುದ್ದೀನ್ ಪಟೇಲ್, ಎ.ಇ. ಹನೀಫ್, ಹನೀಫ್ ಸೆಂಟ್ಯಾರ್ ಸುಳ್ಯ, ನಾಸಿರ್ ಇಂಜಿನಿಯರ್ ಪೆರಾಜೆ, ಕೆ.ಬಿ ಇಬ್ರಾಹಿಂ, ಅಬ್ದುಲ್ ರಝಾಕ್ ತೆಕ್ಕಿಲ್, ಮಹಮ್ಮದ್ ಕುಂಇ’ ತೆಕ್ಕಿಲ್, ಅಬ್ದುಲ್ ಖಾದರ್ ಪಟೇಲ್, ಹಾಜಿ ಕೆ.ಎಂ ಮಹಮ್ಮದ್, ಹಾಜಿ ಸಾಜಿದ್ ಅಝ್ ಹರಿ, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಉಬೈಸ್ ಗೂನಡ್ಕ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಇಬ್ರಾಹಿಂ ಚೆರೂರ್, ಅಮೀರ್ ಕುಕ್ಕುಂಬಳ, ಕೆ.ಎಂ ಮೂಸಾನ್, ಎ. ಉಮ್ಮರ್, ಪಸೀಲು, ಸರ್ಫುದ್ದೀನ್, ಆಶಿಕ್, ತಾಜುದ್ದೀನ್ ಅರಂತೋಡು, ಹನೀಫ್ ಮೊಟ್ಟೆಂಗಾರ್, ರಿಯಾಝ್ ಉದಯನರ, ಮುನೀರ್ ಸೆಂಟ್ಯಾರ್, ಅಬ್ದುಲ್ ಲತೀಫ್ ತೆಕ್ಕಿಲ್, ಸಾಬಿತ್ ಹುದಾವಿ ಮೊದಲಾದವರು ಭಾಗವಹಿಸಿದರು.

whatsapp image 2023 04 20 at 12.47.26 pm
whatsapp image 2023 04 20 at 12.47.32 pm
whatsapp image 2023 04 20 at 12.47.26 pm
Sponsors

Related Articles

Back to top button