ಸುದ್ದಿ

ಅರಂತೋಡು – ಕಬಡ್ಡಿ ಪಂದ್ಯಾಟ ಸಮಾರೋಪ ಸಮಾರಂಭ…

ಸುಳ್ಯ : ಕ್ಲಾಸಿಕ್ ಅರಂತೋಡು ಇದರ ಅಶ್ರಯದಲ್ಲಿ ಪ್ರಥಮ ವರ್ಷದ 60 ಕೆಜಿ ವಿಭಾಗದ ಪುರುಷರ ಸೂರ್ಯ ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಮಾ.21 ರಂದು ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷರಾದ ಡಾ.ಬಿ.ರಘು ಮಾತನಾಡಿ, ಕಬಡ್ಡಿ ಪಂದ್ಯಾಟಕ್ಕೆ ನಮ್ಮ ದೇಶದಲ್ಲಿ ಸರಕಾರವು ಪ್ರಾಮುಖ್ಯತೆ ಕೊಡುತ್ತಾ ಇದೆ. ಕ್ರೀಡೆ ಸೌಹಾರ್ದತೆ ಮತ್ತು ಶಾಂತಿಯ ಸಂಕೇತವಾಗಿದೆ. ಕ್ರೀಡೆಯಿಂದ ಉತ್ತಮ ಭಾಂದವ್ಯ ಬೆಳೆಯುತ್ತದೆ. ಕ್ರೀಡೆಗೆ ಶಕ್ತಿ ಮತ್ತು ಯುಕ್ತಿ ಎರಡೂ ಬೇಕಾಗುತ್ತದೆ ಎಂದು ಹೇಳಿದರು.
ಪ್ರಥಮ ಸ್ಥಾನ ಗಳಿಸಿದ ಚಾಮುಂಡೇಶ್ವರಿ ಅಡ್ಯಡ್ಕ, ದ್ವಿತೀಯ ಸ್ಥಾನ ಗಳಿಸಿದ ಪ್ರಮಯ ಚಿಕನ್ ಅಡ್ಯಡ್ಕ, ತೃತೀಯ ಸ್ಥಾನ ಗಳಿಸಿದ ಕ್ಲಾಸಿಕ್ ಅರಂತೋಡು, ಚತುರ್ಥ ಸ್ಥಾನ ಗಳಿಸಿದ ಶ್ರೀ ವಿಷ್ಣು ಕಡೆಪಾಲ ಪ್ರಶಸ್ತಿ ಪಡಕೊಂಡರು. ಉತ್ತಮ ಹಿಡಿತಗಾರ ಜೀವನ್, ಉತ್ತಮ ರೈಡರ್ ಸಂದೇಶ್, ಉತ್ತಮ ಆಲ್ ರೌಂಡರ್ ಪ್ರದೀಪ್ ರವರು ಪ್ರಶಸ್ತಿ ಪಡೆದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕುಸುಮಾಧರ ಅಡ್ಕಬಳೆ, ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಅರಂತೋಡು ವೇದಿಕೆಯಲ್ಲಿ ಇದ್ದರು. ಮಂಜುನಾಥ ಕಾಟೂರು,ಚೇತನ ಕೊಡೆಂಕೇರಿ,ರವಿ,ರಾಜೇಂದ್ರ ,ನವೀನ ಮುಂತಾದವರು ಉಪಸ್ಥಿತರಿದ್ದರು.ಸಾಗರ್ ಬೆಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published.

Back to top button