ಸುದ್ದಿ

ಲಾಡ್ಜ್‌ ನಲ್ಲಿ ಅಪ್ರಾಪ್ತೆಯ ನಿರಂತರ ಅತ್ಯಾಚಾರ- ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು…

ಕಡಬ: ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್‌ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಘಟನೆ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಏನೆಕಲ್ಲು ನಿವಾಸಿ ಅರುಣ್‌ ಎಂಬಾತ ಕಳೆದೊಂದು ವರ್ಷದಿಂದ 17 ರ ಹರೆಯದ ಯುವತಿಯನ್ನು ಪುಸಲಾಯಿಸಿ ಕಡಬ ಸಮೀಪದ ಕಳಾರ ಎಂಬಲ್ಲಿನ ಲಾಡ್ಜ್‌ವೊಂದರಲ್ಲಿ ಬಲಾತ್ಕಾರದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು, ಯುವತಿಯ ಹೊಟ್ಟೆಯನ್ನು ನೋಡಿದ ಆಕೆಯ ತಾಯಿಯು ಸಂಶಯಗೊಂಡು ಸುಬ್ರಹ್ಮಣ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಆರೋಪಿ ಅರುಣ್‌ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button