ಉರಿ ಗೌಡ – ನಂಜೇ ಗೌಡ ವಿವಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ನಿಲುವು ರಾಜ್ಯಕ್ಕೆ ಉತ್ತಮ ಸಂದೇಶ -ಟಿ.ಎಂ ಶಹೀದ್…

ಯುವಜನತೆಗೆ ಯುವ ನಿಧಿ ಕಾಂಗ್ರೇಸ್ ನಾಲ್ಕನೇ ಗ್ಯಾರಂಟಿ -ಟಿ.ಎಂ ಶಹೀದ್ ತೆಕ್ಕಿಲ್ ಸ್ವಾಗತ…

ಸುಳ್ಯ: ಕಳೆದ ಹಲವು ದಿನಗಳಿಂದ ಬಾರಿ ಸದ್ದು ಮಾಡುತ್ತಿರುವ ಉರಿಗೌಡ – ನಂಜೇಗೌಡ ವಿವಾದವು ಓಟಿಗಾಗಿ ನಡೆಸುತ್ತಿರುವ ಷಡ್ಯಂತರವಾಗಿದ್ದು ಸಮುದಾಯದ ಭಾವನೆಗೆ ದಕ್ಕೆ ತರುವಂತ ಕೆಲಸ ಮಾಡುತ್ತಿದೆಯೆಂದು ತಿಳಿದು ಈ ವಿಚಾರಕ್ಕೆ ಸಂಬಧಿಸಿದಂತೆ ಆದಿಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಧ್ಯಪ್ರವೇಶಿಸಿ ಈ ವಿಷಯವನ್ನು ಮುನ್ನಲೆಗೆ ತಂದ ನಾಯಕರನ್ನು ಕರೆಸಿ ಕ್ಲಪ್ತ ಸಮಯದಲ್ಲಿ ಸೂಕ್ತ ನಿರ್ದೇಶನ ನೀಡಿರುವುದು ಶ್ಲಾಘನೀಯ. ಒಕ್ಕಲಿಗ ಸಮುದಾಯ ಮತ್ತು ಮುಸ್ಲಿಂ ಸಮುದಾಯ ಸೌಹಾರ್ದತೆಯಿಂದ ಬಾಳುತ್ತಿದ್ದು, ಯಾರೊಳಗೂ ಯಾವುದೇ ತೊಡಕು, ಸಂಶಯ ಇರಬಾರದೆಂಬ ಬಯಕೆ ಯುವಜನಾಂಗ ಸೌಹಾರ್ದತೆಯಿಂದ ಇರಲು ಆಹ್ವಾನ ನೀಡಿದ ಸ್ವಾಮೀಜಿಯವರ ನಿಲುವು ರಾಜ್ಯಕ್ಕೆ ಒಳ್ಳೆಯ ಸಂದೇಶವಾಗಿದೆ. ಕೆಲವು ದುಷ್ಟ ಶಕ್ತಿಗಳು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯಲು ಮತ್ತು ನಾತುರಾಂ ಗೂಡ್ಸೆ ಅವರನ್ನು ಬೆಂಬಲಿಸಿ ವೀರ್ ಸವರ್ಕರ್ ಅವರನ್ನು ಮಾತ್ರ ಮಹಾನ್ ದೇಶ ಭಕ್ತರಂತೆ ವ್ಯಾಪಕ ಪ್ರಚಾರ ನೀಡಿದಂತೆ ಇತಿಹಾಸವನ್ನು ತಿರುಚಿ ಟಿಪ್ಪು ಸುಲ್ತಾನ್ ಅವರನ್ನು ಕೂಡ ಅವಹೇಳನ ಮಾಡುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ. ಸ್ವಾಮೀಜಿಯವರು ಸೂಕ್ಷ್ಮತೆಯನ್ನು ಅರಿತು ಅದಕ್ಕೆ ತಕ್ಷಣವೇ ಪರಿಹಾರ ಕಂಡುಹಿಡಿದಿರುವುದರಿಂದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಇತರ ಧರ್ಮದ ಧಾರ್ಮಿಕ ಗುರುಗಳಿಗೆ ಒಬ್ಬ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ವಾಮೀಜಿಯವರ ನಡೆಯನ್ನು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ರವರು ಶ್ಲಾಘಿಸಿದ್ದಾರೆ.
ಕಾಂಗ್ರೇಸ್ ಅಧಿಕಾರಕ್ಕೆ ಬಂದ ತಕ್ಷಣ ವರ್ಷದಲ್ಲಿ 10 ಲಕ್ಷ ಯುವಕರಿಗೆ ಖಾಸಗಿ ಉಧ್ಯೋಗ ಸೃಷ್ಟಿಸಲಿದೆ, ವರ್ಷದಲ್ಲಿ 2.5ಲಕ್ಷ ಸರಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಿದೆ ಇದರಿಂದ ಯುವಕರು ತಮ್ಮ ಮುಂದಿನ ಭವಿಷ್ಯವನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ ಮತ್ತು ಪ್ರದಾನಿ ನರೇಂದ್ರ ಮೋದಿಯವರು ಯುವಕರು ಪಕೋಡ ಮಾರಲಿ ಎಂದು ಹೇಳಿದರೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಐದು ವರ್ಷದಲ್ಲಿ 62 ಲಕ್ಷ ಉಧ್ಯೋಗವನ್ನು ಸೃಷ್ಟಿ ಮಾಡಿ ಯುವಕರಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಲಿದೆ, ನೀರುದ್ಯೋಗದಿಂದ ಬಳಲುತ್ತಿರುವ ಯುವಕರಿಗೆ ಕಾಂಗ್ರೆಸ್ ನಾಲ್ಕನೆ ಗ್ಯಾರಂಟಿಯಾಗಿ, ಪದವೀಧರರಿಗೆ 3000ರೂ ಡಿಪ್ಲೊಮಾ ಪದವೀಧರರಿಗೆ 1500ರೂ ಭತ್ಯೆಯನ್ನು ನೀಡುವ ಕಾಂಗ್ರೇಸ್ ಪಕ್ಷದ ಯುವ ನಿಧಿ ಯೋಜನೆ ಯುವಕರು ತಪ್ಪು ದಾರಿ ತುಳಿಯುವುದನ್ನು ತಡೆಯುವ ದೊಡ್ಡ ಕ್ರಾಂತಿಕಾರಿ ಹೆಜ್ಜೆ ಎಂದು ಟಿ.ಎಂ ಶಹೀದ್ ತೆಕ್ಕಿಲ್ ಅಭಿಪ್ರಾಯಪಟ್ಟಿದ್ದಾರೆ.

img 20230124 wa0049
ಟಿ.ಎಂ ಶಹೀದ್ ತೆಕ್ಕಿಲ್
Sponsors

Related Articles

Back to top button