ಕಲ್ಲಡ್ಕ – ಬ್ರಹ್ಮಶ್ರೀ ನಾರಾಯಣ ಗುರುವರಿಯರ 168ನೇ ಜನ್ಮ ದಿನಾಚರಣೆ…

ಬಂಟ್ವಾಳ: ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಪಂಟಪದಲ್ಲಿ ಬಂಟ್ವಾಳ ತಾಲೂಕಿನ ಗೋಳ್ತ ಮಜಲು, ಬಾಳ್ತಿಲ, ವೀರಕಂಬ,ಬೋಳಂತೂರು, ಅಮ್ಟೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರಿಯರ 168ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುಪೂಜೆ ಮತ್ತು ಭಜನಾ ಸಂಕೀರ್ತನೆ ನಡೆಯಿತು.
ಆಶೀರ್ವಚನ ನೀಡಿದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರೆದಾಲ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ರವರು ರಾಜಕೀಯವನ್ನು ಬದಿಗೆ ಇಟ್ಟು ಸಮಾಜ ಬಾಂಧವರು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಬಿಲ್ಲವ ಸಮಾಜದ ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ತನ್ನ ನೇತೃತ್ವದಲ್ಲಿ ನಡೆಯುವ 658 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆಗೆ ಬಿಲ್ಲವ ಸಮಾಜವು ಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಇವರ ಅಧ್ಯಕ್ಷತೆಯಲ್ಲಿ
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ ಮಾಡಿದರು. ಶ್ರೀ ನಾರಾಯಣ ಗುರುತತ್ವ ಉಪನ್ಯಾಸವನ್ನು ಮಾಡಿದ ಶ್ರೀಮತಿ ರೇಣುಕಾ ಕಣಿಯೂರು ರವರು ಸಂಘಟನೆಯಿಂದ ಬಲಯುತರಾಗಿ ಎಂಬ ಗುರುವಿನ ಮಾತಿನಂತೆ ಸಮಾಜದಲ್ಲಿ ಆಗುವ ತಾರತಮ್ಯ ಶೋಷಣೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿದ ಗುರು ತತ್ವ ,ಹಿಂದು ಧರ್ಮದ ಭದ್ರ ಬುನಾದಿ ಹಾಕಿಕೊಟ್ಟ ಗುರು ತತ್ವದ ಬಗ್ಗೆ ಸಂದೇಶವನ್ನು ಸವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್ ಬಿಲ್ಲವ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ವೇದಿಕೆಯಲ್ಲಿ ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರು ಇದರ ಪ್ರಮುಖರಾದ ಶ್ರೀ ಮನೋಜ್ ಕುಮಾರ್ ಕಟ್ಟೆಮಾರ್, ಬಿಲ್ಲವಾ ಮಹಾಮಂಡಲದ ಅಧ್ಯಕ್ಷ ಬೇಬಿ ಕುಂದರ್, ,ಮರಕಡ ಬೈಲು ಗುತ್ತು ಗರಡಿ ಮನೆ ಧರ್ಮ ಚಾವಡಿ ಅಧ್ಯಕ್ಷರಾದ ರಾಘವ ಅಮೀನ್, ಓಂ ಸಾಯಿ ಕನ್ಸ್ಟ್ರಕ್ಷನ್ ಬಾಲ್ತಿಲ ಇದರ ಮಾಲಕರಾದ ಶ್ರೀ ರವಿಶಂಕರ್, ಮಾತೃಭೂಮಿ ಕಂಟ್ರಕ್ಷನ್ ಬರಿಮಾರು ಇದರ ಮಾಲಕರಾದ ಸದಾನಂದ ಪೂಜಾರಿ , ಶ್ರೀ ಭಗವಾನ್ ಸಾಯಿಬಾಬಾ ಅರ್ಥ ಮೂವರ್ಸನ ಮಾಲಕರಾದ ಕಿಶೋರ್ ಕುಮಾರ್ ಕಟ್ಟೆಮರ್, , ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ಕಲ್ಲಡ್ಕ ಇದರ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಲ್ಲವ ಸಮುದಾಯದ ಬಂಧುಗಳನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಹಾಗೂ ಕಲ್ಲಡ್ಕ ಕಲಾವಿದರಿಂದ ಹಾಸ್ಯ ಪ್ರಹಸನ ಹಾಗೂ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೆ ಶಿವಾಲಯ ಇವರಿಂದ ನೃತ್ಯ ಕಾರ್ಯಕ್ರಮ ನೆರವೇರಿತು ,
ಬಿಲ್ಲವ ಸಮಾಜ ಸೇವಾ ಸಂಘ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಸ್ವಾಗತಿಸಿ, ವಸಂತ ಭಟ್ಟಿ ಹಿತ್ಲು ಧನ್ಯವಾದ ನೀಡಿದರು. ಸಂತೋಷ್ ಕುಮಾರ್ ಬೊಲ್ಪೋಡಿ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button