ಕಲ್ಲಡ್ಕ ಹಾಲು ಉತ್ಪಾದಕರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ…
ಬಂಟ್ವಾಳ: ಕಲ್ಲಡ್ಕ ಹಾಲು ಉತ್ಪಾದಕರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಕಲ್ಲಡ್ಕ ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅದ್ಯಕ್ಷರಾದ ಶ್ರೀ ಕೆ ಪಧ್ಮನಾಭ ಕೊಟ್ಟಾರಿಯವರು ಸಂಘದ ಸದಸ್ಯರಿಗೆ ಶೇ 15% ಡಿವಿಡಂಡ್ ಹಾಗೂ ಪ್ರತೀ ಲೀ.ಗೆ 90 ಪೆಸೆ ಬೋನಸ್ ಘೋಷಿಸಿದರು.ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲನ್ನ ಹಾಕುತ್ತಿದ್ದು ಇದು ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ.ಸಂಘದ ಸದಸ್ಯರ ರಾಸುಗಳಿಗೆ ಅನುಕೂಲ ಆಗುವ ದ್ರಷ್ಟಿಯಿಂದ ರಾಸು ಇನ್ಸೂರೆನ್ಸ್ ಇದ್ದು ದ.ಕ ಹಾಲು ಒಕ್ಕೂಟ ಶೇ75%ಅನುದಾನ ನೀಡುತ್ತಿದ್ದು ಶೇ.25%ನ್ನು ಸಂಘದ ವತಿಯಿಂದ ನೀಡುತ್ತಿದ್ಧೆವೆ.ಇದರಿಂದ ಸದಸ್ಯರ ರಾಸುಗಳಿಗೆ ಉಚಿತವಾಗಿ ಈ ಸೇವೆಯನ್ನು ನೀಡಲಾಗಿದ್ದು ಇದರ ಸದುಪಯೋಗ ಪಡೆಯಲು ಹೇಳಿದರು.ದ.ಕ ಹಾಲು ಒಕ್ಕೂಟ್ಟದಿಂದ ವಿಸ್ತಾರಾಣಾಧಿಕಾರಿ ಶ್ರೀ ಜಗದೀಶ್ ಮಾತಾನಾಡಿ ಒಕ್ಕೂಟದಿಂದ ಸದಸ್ಯರಿಗೆ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ s.s.l.c ಹಾಗೂ p.u.c ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ನಗದು ಪುರಸ್ಕಾರದೊಂದಿಗೆ ಅಬಿನಂದಿಸಲಾಯಿತು.220 ಸದಸ್ಯರಿಗೆ ಅವರ ಹಾಲಿನ ಪರಿಮಾಣಕ್ಕೆ ತಕ್ಕಂತೆ ಪ್ರೋತ್ಸಾಹಕ ಬಹುಮಾನ ನೀಡಿ ಅಬಿನಂದಿಸಲಾಯಿತು .ಒಕ್ಕೂಟದ ವಿಟ್ಲ ವಲಯ ವಿಸ್ತಾರಣಾದಿಕಾರಿ ಶ್ರೀಮತಿ ಪ್ರಪುಲ್ಲ ಉಪಸ್ಥಿತರಿದ್ದರು.ಸಂಘದ ಉಪಾದ್ಯಕ್ಷರಾದ ಶ್ರೀ ರತ್ನಾಕರ ಪ್ರಭು ಹಾಗೂ ನಿರ್ದೇಶಕರಾದ ಸಂಕಪ್ಪ ಕೊಟ್ಟಾರಿ ಶ್ರೀಧರ ಶೆಟ್ಟಿ ರತ್ನಾಕರ ಭಂಡಾರಿ ಶಿವಾನಂದ ಪುಜಾರಿ ಶಾಂತಪ್ಪ ಮೂಲ್ಯ ಜಯರಾಮ ಕೊಟ್ಟಾರಿ ಪುಷ್ಪರಾಜ ಪಿಲಿಂಜ ಗೋಪಾಲ ನಾಯ್ಕ ನೆಟ್ಲ ಶ್ರೀಮತಿ ಸಾಮ್ಯ ಶ್ರೀಮತಿ ಧನವತಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ರಾಜೇಶ್ ಕೆ ಕಾರ್ಯಕ್ರಮ ನಿರ್ವಹಿಸಿದರು.ಹಾಲು ಪರೀಕ್ಷಕ ರಾಮಚಂದ್ರ ಬಿ.ಎಮ್.ಸಿ ಸಿಬ್ಬಂದಿ ರೇವತಿ ಸಹಕರಿಸಿದರು.