ಕಲ್ಲುಗುಂಡಿ ಅಗ್ನಿ ಅವಘಡ – ತೆಕ್ಕಿಲ್ ಪ್ರತಿಷ್ಠಾನದಿಂದ ರೂ. 10 ಸಾವಿರ ತುರ್ತು ಪರಿಹಾರ…
ಸುಳ್ಯ :ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿಷೆಡ್ ನಲ್ಲಿ ಮಧ್ಯರಾತ್ರಿ 12.40 ಕ್ಕೆ ನಡೆದ ಅಗ್ನಿ ಅವಘಡಕ್ಕೆ ಲಿಗೋರಿ ಟಯರ್ ಅಂಗಡಿ, ಸೋಡಾ ಮಹಮದ್ ರವರ ಕಟ್ಟಡ ಮತ್ತು ಅಂಗಡಿ, ಆನಂದ ರವರ ದುರ್ಗಾ ಹೋಟೆಲ್ ಬೆಂಕಿಗೆ ಅಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಆಗಿದ್ದು, ರಾತ್ರಿ ಸಾರ್ವಜನಿಕರು ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ಅಂದಾಜು 40 ಲಕ್ಷದಷ್ಟು ನಷ್ಟವಾಗಿದ್ದು, ಸರಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಸ್ಥಳ ಸಂದರ್ಶಿಸಿದ ನಂತರ ಸಂತೃಸ್ತರನ್ನು ಸಮಾಧಾನಪಡಿಸಿ ಸರಕಾರ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ , ಹೆಚ್ ಪಿ ಅನಿಲ ಕಂಪೆನಿ ಅವರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನಕ್ಕೆ ತಂದು ತುರ್ತು ಪರಿಹಾರ ನೀಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸದಸ್ಯರುಗಳಾದ ಜಗದೀಶ ರೈ ಕಲ್ಲುಗುಂಡಿ, ಅಬುಸಾಲಿ, ಎಸ್ ಕೆ ಹನೀಫ್ ಸಂಪಾಜೆ, ರಹೀಂ ಬೀಜದಕಟ್ಟೆ, ಟೈರ್ ಅಂಗಡಿ ಮಾಲೀಕ ಲಿಗೋರಿ ಡಿ ಸೋಜ, ಶ್ರೀದುರ್ಗಾ ಹೊಟೇಲ್ ನ್ ಏನಿಯರ ಆನಂದ, ಕಟ್ಟಡದ ಮಾಲಕರಾದ ಮೊಹಮ್ಮದ್ ಕುಂಞ ಸೋಡಾ, ಮುಂತಾದವರು ಉಪಸ್ಥಿತರಿದ್ದರು. ತೆಕ್ಕಿಲ್ ಪ್ರತಿಷ್ಠಾನದಿಂದ ತುರ್ತು ಪರಿಹಾರವಾಗಿ ಹತ್ತು ಸಾವಿರ ರೂಪಾಯಿಯನ್ನ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಪರವಾಗಿ ತೆಕ್ಕಿಲ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ರವರಿಗೆ ಹಸ್ತಾಂತರಿಸಿದರು.