ಗೂನಡ್ಕ ದರ್ಕಾಸ್ ಅಂಗನವಾಡಿ ಕಟ್ಟಡ – ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರಿಂದ 3 ಲಕ್ಷ ಅನುದಾನ…
ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ಅಂಗನವಾಡಿ ಕಟ್ಟಡ ಹಾಗು ಆರೋಗ್ಯ ಸಹಾಯಕಿ ಕಟ್ಟಡಗಳಿಗೆ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಜೆಡಿಎಸ್ ಕಾರ್ಯಾಧ್ಯಕ್ಷರಾದ ಬಿ ಎಂ ಫಾರೂಕ್ ರವರ ಅನುದಾನ ದಲ್ಲಿ 3 ಲಕ್ಷ ಮಂಜೂರಾಗಿದ್ದು, ಮಂಜೂರಾತಿ ಮಾಡಿದ ಉದ್ಯಮಿ, ವಿಧಾನಪರಿಷತ್ತಿನ ಸದಸ್ಯರಾದ ಫಾರೂಕ್ ರವರಿಗೂ, ಮಂಜೂರಾತಿಗೆ ವಿಶೇಷ ಪ್ರಯತ್ನ ಮಾಡಿದ್ದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಶಿಕ್ಷಣ ಪ್ರೇಮಿ, ಅಭಿವೃದ್ಧಿಯ ಹರಿಕಾರ ಟಿ ಎಮ್ ಶಾಹಿದ್ ತೆಕ್ಕಿಲ್ ರವರಿಗೆ ಗಾಂಧಿ ಪ್ರಶಸ್ತಿ ಪುರಸ್ಕೃತ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಸಾಲಿ ಗೂನಡ್ಕ, ಅಯ್ಯೂಬ್ ಚೆರೂರ್, ಅಝಾರ್ ಚೆರೂರ್ ಈ ಬಗ್ಗೆ ಟಿ ಎಂ ಶಾಹೀದ್ ತೆಕ್ಕಿಲ್ ರವರಲ್ಲಿ ವಿನಂತಿಸಿದ್ದರು.