ಕರ್ಜಿಕಾಯಿ…
ಕರ್ಜಿಕಾಯಿ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ, ನಂತರ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದದಂತೆ ಬೆರೆಸಿ, ಸುಮಾರು ಹದಿನೈದು ನಿಮಿಷ ಹಾಗೆ ಬಿಡಿ.
ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆ,ತೆಂಗಿನ ಕಾಯಿ ತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿಡಿ. ಇದನ್ನು ಹೂರಣ ಎನ್ನುತ್ತಾರೆ.
ಈಗಾಗಲೇ ಬೆರೆಸಿಟ್ಟ ಮೈದಾಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಅದರಿಂದ ಪೂರಿಯಂತೆ ಲಟ್ಟಿಸಿ. ಪೂರಿಯೊಳಗೆ ಒಂದೆರಡು ಚಮಚ ಹೂರಣವನ್ನು ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ, ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಚೆನ್ನಾಗಿ ಅದುಮಿ ಮುಚ್ಚಬೇಕು. ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ.
ಬರಹ: ಶ್ರೀಮತಿ ರಶ್ಮಿ ಪಿ.ಸಿ