ಕರ್ನಾಟಕ- ಸೋಮವಾರ 84 ಮಂದಿಗೆ ಕೊರೊನ ಸೋಂಕು ದೃಢ….

ಬೆಂಗಳೂರು: ರಾಜ್ಯದಲ್ಲಿ ಆದಿತ್ಯವಾರ ಸಂಜೆಯ ನಂತರ ಇದುವರೆಗೆ ಒಟ್ಟು 84 ಕೊರೊನ ಸೋಂಕು ಪ್ರಕರಣಗಳು ದೃಢವಾಗಿದೆ.
ಬೆಂಗಳೂರು ನಗರದಲ್ಲಿ 18 ಪ್ರಕರಣಗಳು,ಮಂಡ್ಯದಲ್ಲಿ 17 ಪ್ರಕರಣಗಳು, ಕಲಬುರಗಿ ಮತ್ತು ರಾಯಚೂರಿನಲ್ಲಿ ತಲಾ ಆರು ಪ್ರಕರಣಗಳು, ಉತ್ತರ ಕನ್ನಡದಲ್ಲಿ ಎಂಟು ಪ್ರಕರಣಗಳು, ಗದಗ, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ ಐದು ಪ್ರಕರಣಗಳು ದೃಢವಾಗಿದೆ. ಹಾಸನದಲ್ಲಿ 4 ಹೊಸ ಪ್ರಕರಣ, ಕೊಪ್ಪಳದಲ್ಲಿ 3 ಪ್ರಕರಣಗಳು, ಬೆಳಗಾವಿಯಲ್ಲಿ 2 ಮತ್ತು ಮೈಸೂರು, ಕೊಡಗು, ದಾವಣಗೆರೆ, ಬೀದರ್ ಮತ್ತು ಬಳ್ಳಾರಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ. ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬರುತ್ತಿದೆ.
ರಾಜ್ಯದ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 1231 ಆಗಿದೆ.

Sponsors

Related Articles

Back to top button