ವಿಟ್ಲ – ಕಂಪ್ರೆಷರ್ ಟ್ರಾಕ್ಟರ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು…..

ವಿಟ್ಲ: ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು,ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ನಡೆದಿದೆ.
ಒರಿಸ್ಸಾ ಮೂಲಕ ಮುಕುಟ್ ಟಿರ್ಕಿ (16) ಮೃತ ವ್ಯಕ್ತಿಯಾಗಿದ್ದಾರೆ. ಅಜ್ಜಿನಡ್ಕ ಚಂದಳಿಕೆ ರಸ್ತೆಯಲ್ಲಿ ಕಂಪ್ರೆಷರ್ ಟ್ರಾಕ್ಟರ್ ಅನ್ನು ಅದರ ಚಾಲಕ ರಘು ಬಿಟ್ಟುಕೊಂಡು ಹೋಗುವ ಸಮಯದಲ್ಲಿ ಈತ ಟೂಲ್ಸ್ ಬಾಕ್ಸ್ ಮೇಲೆ ಕುಳಿತಿದ್ದ ಎನ್ನಲಾಗಿದೆ. ಆಯ ತಪ್ಪಿ ಟ್ರಾಕ್ಟರ್ ನಿಂದ ಕೆಳಗೆ ಬಿದ್ದು ಹಿಂಬದಿ ಚಕ್ರ ಚಲಿಸಿದ ಪರಿಣಾಮ ಗಂಭೀರ ಗಾಯ ಗೊಂಡು ದೇರಳಕಟ್ಟೆ ಕೆ ಎಸ್ ಹೆಗಡೆ ಆಸ್ವತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದರೂ ಪ್ರಯೋಜನವಾಗದೆ ಮೃತ ಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button