ಕೆಸಿಎಫ್ ಒಮಾನ್: 2022 – 23ರ ಸದಸ್ಯತ್ವನ ಅಭಿಯಾನ ಕ್ಕೆ ಅಧಿಕೃತ ಚಾಲನೆ…

ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಡಿಸೆಂಬರ್ 30 ರಂದು ಶುಕ್ರವಾರ ಜುಮ್ಮಾ ನಮಾಜಿನ ಬಳಿಕ ಇಕ್ಬಾಲ್ ಬರ್ಕ ನಿವಾಸದಲ್ಲಿ ಕೆಸಿಎಫ್ ಸದಸ್ಯತ್ವ ಅಭಿಯಾನ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ‌ ಜನಾಬ್ ಅಯ್ಯೂಬ್ ಕೋಡಿ ಇವರು ಕೆಸಿಎಫ್ ಸದಸ್ಯತ್ವ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಕೆಸಿಎಫ್ ಒಮಾನ್ ಸದಸ್ಯತ್ವ ಅಭಿಯಾನ ಚಯರ್ಮೆನ್ ಇಕ್ಬಾಲ್ ಬರ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಕೊಡಗು ಇವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ , ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು, ಝುಬೈರ್ ಸ ಅದಿ, ಶಫೀಕ್ ಮಾರ್ನಬೈಲು, ಇರ್ಪಾನ್ ಕೂರ್ನಡ್ಕ,ಕಲಂದರ್ ಬಾವ, ಮಸ್ಕತ್ ಝೋನ್ ಅಧ್ಯಕ್ಷ ನವಾಝ್ ಮಣಿಪುರ, ಸೀಬ್ ಝೋನ್ ಅಧ್ಯಕ್ಷ ಜಸೀಮ್ ಅಹಮದ್, ಬೌಶರ್ ಝೋನ್ ಅಧ್ಯಕ್ಷ ಹನೀಫ್ ಮನ್ನಾಪು,ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಸದಸ್ಯರು ಹಾಗೂ ಝೋನ್ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಕೆಸಿಎಫ್ ಸೊಹಾರ್ ಝೋನ್ ನಲ್ಲಿ ಅಧ್ಯಕ್ಷ ಅಶ್ರಫ್ ಕುತ್ತಾರ್ ರವರು ಕೆಸಿಎಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಸಿದ್ದೀಕ್ ಮಾಂಬ್ಲಿ ಸುಳ್ಯ ,ಇಕ್ಬಾಲ್ ಎರ್ಮಾಳ್, ಇಕ್ಬಾಲ್ ಮದನಿ ಚೆನ್ನಾರ್, ಉಪಸ್ಥಿತರಿದ್ದರು. ಕೆಸಿಎಫ್ ಸಲಾಲ ಝೋನ್ನಲ್ಲಿ ಅಧ್ಯಕ್ಷ ಲತೀಫ್ ಸುಳ್ಯ ಇವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಕಮಾಲ್ ಸುಳ್ಯ ,ಶರೀಫ್ ಮಿಸ್ಬಾಯಿ ಸುಳ್ಯ ಉಪಸ್ಥಿತರಿದ್ದರು. ಹಾಗೂ ನಿಝ್ವ ಝೋನ್ ನಲ್ಲಿ ಹುಸೈನ್ ತೀರ್ಥಹಳ್ಳಿ ಇವರು ಕೆಸಿಎಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಇಬ್ರಾಹಿಂ ಕಟ್ಪಾಡಿ, ರಮೀಝ್ ಕಟ್ಪಾಡಿ ಉಪಸ್ಥಿತರಿದ್ದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಮಟ್ಟದಲ್ಲಿ ಸದಸ್ಯತ್ವನ ಅಭಿಯಾನವು ಜನವರಿ 1 ರಿಂದ 15 ರವರೆಗೆ ನಡೆಯಲಿದೆ.

Sponsors

Related Articles

Back to top button