ಸುದ್ದಿ

KCF ಒಮಾನ್ ಸಲಾಲ ಝೋನ್ ಮಹಾಸಭೆ- ನೂತನ ಸಾರಥಿಗಳ ಆಯ್ಕೆ…

ಸಲಾಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಲಾಲ ಝೋನ್ ಇದರ ವಾರ್ಷಿಕ ಮಹಾಸಭೆಯು ಅಬ್ದುಲ್ ಲತೀಫ್ ಸುಳ್ಯ ಇವರ ಅಧ್ಯಕ್ಷತೆಯಲ್ಲಿ ಸಿಟಿ ಹೊಟೇಲ್ ನಲ್ಲಿ 2022 ಮಾ. 25 ರಂದು ನಡೆಯಿತು.
ಕೆಸಿಎಫ್ ಸಲಾಲ ಝೋನ್ ನ ಸಂಘಟನಾಧ್ಯಕ್ಷರಾದ ಮುಹಮ್ಮದ್ ಶರೀಫ್ ಮಿಸ್ ಬಾಯಿ ಸುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಳೆದ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳಾದ ಉಮ್ಮರ್ ಫಾರೂಕ್ ಸೂರಿಬೈಲ್ ರವರು ಮಂಡಿಸಿದರು ಹಾಗೂ ಲೆಕ್ಕ ಪತ್ರ ವನ್ನು ಕೋಶಾಧಿಕಾರಿ ಮಂಡಿಸಿದರು ನಂತರ ಸಭೆಯಲ್ಲಿ ಮಂಜೂರು ಗೊಳಿಸಲಾಯಿತು.
ಪ್ರಸ್ತುತ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಿ.ಎ ಸುಳ್ಯ , ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್ ಸೂರಿಬೈಲ್, ಕೋಶಾಧಿಕಾರಿಯಾಗಿ ಉಮ್ಮರ್ ಫಾರೂಕ್ ಕೃಷ್ಣಾಪುರ, ಸಂಘಟನಾಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮಿಸ್ ಬಾಯಿ ಸುಳ್ಯ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಪೈಚಾರ್ ಸುಳ್ಯ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಸದಖತುಲ್ಲಾ ಕಳಸ, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಪಾಲೇರಿ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಸಫ್ವಾನ್ ಕೃಷ್ಣಾಪುರ, ಕಾರ್ಯದರ್ಶಿಯಾಗಿ ನಾಸರ್ ನಂದಾವರ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಕಬೀರ್ ಸಿ. ಎ ಸುಳ್ಯ, ಕಾರ್ಯದರ್ಶಿಯಾಗಿ ರಫೀಕ್ ಪಡುಬಿದ್ರಿ , ಆಡಳಿತ & ಸಾರ್ವಜನಿಕ ಸಂಪರ್ಕ ಇಲಾಖೆಯ ಅಧ್ಯಕ್ಷರಾಗಿ ಹನೀಫ್ ಸುಳ್ಯ, ಕಾರ್ಯದರ್ಶಿಯಾಗಿ ಹೈದರ್ ಸಜಿಪನಡವು, ಇಹ್ಸಾನ್ ವಿಂಗ್ ಇದರ ಅಧ್ಯಕ್ಷರಾಗಿ ಕಮಾಲ್ ಸುಳ್ಯ ಕಾರ್ಯದರ್ಶಿಯಾಗಿ ಬಶೀರ್ ಅಡ್ಕಾರ್ ಸುಳ್ಯ, ಉರ್ದು ವಿಂಗ್ ಕೋರ್ಡಿನೇಟರಾಗಿ ನಾಸಿರ್ ಮೂಡುಬಿದಿರೆ ಹಾಗೂ ಎಕ್ಸಿಕ್ಯುಟಿವ್ ಸದಸ್ಯರುಗಳಾಗಿ ಅಬ್ದುಲ್ ಮಜೀದ್ ಕೊಡಗು, ಖಾದರ್ ಸುಳ್ಯ, ಮಜೀದ್ ಅಮಾನಿ ನಾಪೊಕ್ಲು, ಅಬ್ದುಲ್ ಲತೀಫ್ ಪಡುಬಿದ್ರಿ, ಮುಹಮ್ಮದ್ ಶರೀಫ್ ಕುಂಜತಬೈಲ್, ರಿಝ್ವಾನ್ ಕೊಪ್ಪ, ಅಲೀಮ್ ಉಡುಪಿ, ಸಿದ್ದೀಕ್ ಅಹಮದ್ ನೇರಳೆಕಟ್ಟೆ, ಜಮೀಲ್ ಉಡುಪಿ, ಶಫೀಕ್ ಮಂಜೇಶ್ವರ, ಅಶ್ರಫ್ ಉಳ್ಳಾಲ ಇವರುಗಳನ್ನು ಆರಿಸಲಾಯಿತು.
ಝೋನ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಸೂರಿಬೈಲ್ ಸಭೆಯನ್ನು ಸ್ವಾಗತಿಸಿದರು. ನಾಸರ್ ನಂದಾವರ ವಂದಿಸಿದರು.ಕೊನೆಗೆ ಯಾ ಅಕ್ ರಮ ಬೈತ್ ಹಾಡಿ ಮೂರೂ ಸ್ವಲಾತ್ ನೊಂದಿಗೆ‌ ಸಭೆಯನ್ನು ಕೊನೆಗೊಳಿಸಲಾಯಿತು.

Related Articles

Back to top button