ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೋವಿಡ್ ಲಸಿಕಾ ಮೇಳ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೋವಿಡ್ ಲಸಿಕಾ ಮೇಳವನ್ನು ಏರ್ಪಡಿಸಲಾಯಿತು. ಸರ್ಕಾರದ ಆದೇಶದನ್ವಯ ಪುತ್ತೂರು ಶಾಸಕರ ವಾರ್ ರೂಮ್ ನ ಸಹಕಾರದೊಂದಿಗೆ ಇದನ್ನು ನಡೆಸಲಾಯಿತು.
ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರ ಮುಂದಾಳುತ್ವದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಡೆಸಿಕೊಟ್ಟರು. ಸುಮಾರು 300 ಜನ ವಿದ್ಯಾರ್ಥಿಗಳು ಮತ್ತು 20 ಜನ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಯಿತು. ನೋಡಲ್ ಅಧಿಕಾರಿ ಶ್ರೀನಿವಾಸ ಭಟ್, ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಸಿಬ್ಬಂದಿಗಳು ವಿವಿಧ ಕಾರ್ಯಗಳನ್ನು ನಿರ್ವಹಿಸಿ ಸಹಕರಿಸಿದರು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ತಿಳಿಸಿದ್ದಾರೆ.

Related Articles

Back to top button