Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ರವರಿಗೆ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ…

ಸುಳ್ಯ: ಕರ್ನಾಟಕ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ರಾಜಕೀಯ, ಕ್ರೀಡೆ, ಶಿಕ್ಷಣ, ಸಹಕಾರಿ, ಮತ್ತು ಗ್ರಾಮೀಣ ಪ್ರದೇಶ ಅಭಿವೃದ್ಧಿ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಕಾರ್ಮಿಕ ಸಂಘದ ಅಭಿವೃದ್ಧಿಗೆ ದುಡಿಯಲು ಸಲಹೆ ನೀಡಿದರು. ಅವರನ್ನು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಮಾಜಿ ಕಾರ್ಮಿಕ ಸಚಿವ ನಜಿರ್ ಅಹಮದ್ ಸಿದ್ದಿಕಿಯವರ ಪುತ್ರ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಜಹತ್ ಸಿದ್ದಿಕಿ, ಕೆಪಿಸಿಸಿ ಉಸ್ತುವಾರಿ ಎಂ ಕೃಷ್ಣಪ್ಪ,ಈರಣ್ಣ ಮಡಿವಾಳ ಹಾಗೂ ಶ್ರೀನಿವಾಸ ರವರನ್ನು ತೆಕ್ಕಿಲ್ ಪ್ರತಿಷ್ಟಾನದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ, ಆರಂತೋಡು ಬದ್ರಿಯಾ ಮಸ್ಜಿದ್ ಕಾರ್ಯದರ್ಶಿ ಅಧ್ಯಕ್ಷರಾದ ಅಶ್ರಫ್ ಗುಂಡಿ,ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಸಿದ್ದಿಕ್ ಕೊಕೊ, ಟಿ ಎಂ ಶೈನ್ ತೆಕ್ಕಿಲ್, ಸಿರಾಜ್ ಜಯನಗರ ಉಪಸ್ಥಿತರಿದ್ದರು.

Related Articles

Back to top button