ಯುವಕರು ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಬೇಕು- ಗೂನಡ್ಕ ಪೇರಡ್ಕ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್…

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸರಕಾರದ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ರವರು ಭೇಟಿ ನೀಡಿದರು.
ದರ್ಗಾ ಶರೀಫ್, ನವೀಕರಣಗೊಂಡ ಪುರಾತನ ಮಸೀದಿ, ಪ್ರವಾಸಿ ಮಂದಿರ, ರಸ್ತೆ,ಕಂಪೌ೦ಡ್ ನ್ನು ನಿರ್ಮಾಣವನ್ನು ವೀಕ್ಷಿಸಿ ಸಂತಸ ವ್ಯಕ್ತ ಪಡಿಸಿದರು ಹಲವಾರು ಅಭಿವೃದ್ಧಿ ಮುಂದೆಯೂ ನಡೆಯುತ್ತದೆಇ ಭಾಗದ ನಾಯಕರಾಗಿರುವ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಅವರ ಕುಟುಂಬಸ್ಥರು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮತ್ತು ಈ ಊರಿನ ಹಿರಿಯರ ನಿಷ್ಠೆ, ಪ್ರಾಮಾಣಿಕ ಸೇವೆಯಿಂದಾಗಿ ಅದ್ಬುತವಾದ ಕೆಲಸಗಳು ಆಗಿದೆ ಮುಂದೆಯು ಉತ್ತಮ ಕೆಲಸಗಳು ಆಗುತ್ತದೆ ಎಂದು ಹಾರೈಸಿದರು. ಟಿ ಎಂ ಶಾಹಿದ್ ತೆಕ್ಕಿಲ್ ಅವರ ಜೊತೆ ಕಳೆದ ಮೂವತ್ತೈದು ವರ್ಷ ಕೆಲಸ ಮಾಡಿದ್ದು ಹಲವು ಉನ್ನತ ಹುದ್ದೆ ಅವರಿಗೆ ದೊರಕಿದೆ ಅವರ ಶ್ರಮ ಸೇವೆ ಶ್ಲಾಘನೀಯ ಎಂದು ಕೆಲಸ ಕಾರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು,ಯುವಕರು ಸಮಾಜದ ಆಸ್ತಿ ಯುವ ಜನಾಂಗ ಸಹೋದರತೆಯನ್ನು ಕಾಪಾಡಿ ಒಳ್ಳೆಯ ಕೆಲಸ ಮಾಡಲು ಪ್ರೆರೇಪಿಸಲು ಮನವಿ ಮಾಡಿದರು.ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಖತೀಬ್ ರಿಯಾಸ್ ಫೈಜಿ,ಜಿ ಕೆ ಹಮೀದ್ ಗೂನಡ್ಕ,ಟಿ ಎಂ ಬಾಬ ಹಾಜಿ ತೆಕ್ಕಿಲ್,ಪಾಂಡಿ ಅಬ್ಬಾಸ್, ಕಾರ್ಯದರ್ಶಿ ಟಿ ಎಂ ಅಬ್ದುಲ್ ರಾಝಕ್, ತೆಕ್ಕಿಲ್ ಮಹಮದ್ ಕುಂಞಿ ಪೇರಡ್ಕ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಾಜೀದ್ ಆಜ್ಹಾರಿ ತೆಕ್ಕಿಲ್ ಪೇರಡ್ಕ,ಎಂ ಆರ್ ಡಿ ಎ ಅಧ್ಯಕ್ಷರಾದ ಜಾಕೀರ್ ಹುಸೇನ್, ಕೆಪಿಸಿಸಿಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಅಬುಶಾಲಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್ ಕೆ ಹನೀಫ್, ಸ್ಥಳೀಯ ಖತೀಬರಾದ ಬಹು| ರಿಯಾಜ್ ಪೈಝಿ, ಖಜಾಂಜಿ ಪಿ ಕೆ ಉಮ್ಮರ್ ಗೂನಡ್ಕ , ಖಲಂದರ್ ಎಲಿಮಲೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.ಗಾಂಧಿ ಪುರಸ್ಕೃತ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಊರೂಸ್ ಸಮಿತಿ ಕಾರ್ಯದರ್ಶಿ ಹಾಗು ಅಭಿವೃದ್ಧಿಯ ಹರಿಕಾರ ಜಿ ಕೆ ಹಮೀದ್ ಗೂನಡ್ಕ ಅವರನ್ನು ವಿರೋಧ ಪಕ್ಷದ ಉಪ ನಾಯಕ ಯು ಟಿ ಖಾದರ್ ಸನ್ಮಾನಿಸಿದರು.

whatsapp image 2023 02 21 at 11.43.35 am
Sponsors

Related Articles

Back to top button