ಪೇರಡ್ಕ ಗೂನಡ್ಕ ಈದ್ ನಮಾಜಿಗೆ ರಿಯಾಝ್ ಪೈಝಿ ಉಸ್ತಾದ್ ನೇತೃತ್ವ…

ಸುಳ್ಯ: ತ್ಯಾಗ- ಬಲಿದಾನಕ್ಕೆ ಇನ್ನೊಂದು ಹೆಸರೇ ಈದುಲ್ ಅಝ್ ಹಾ. ಅತ್ಯಂತ ಸಂತಸ ಸಡಗರದೊಂದಿಗೆ ಆಚರಿಸಲ್ಪಡುವ ಈ ಹಬ್ಬವನ್ನು ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿಯೂ ಅತ್ಯಂತ ಸರಳವಾಗಿ ಅಚರಿಸಿ ಸಮಾಜಿಕ ಬದ್ದತೆ ಪ್ರದರ್ಶಿಸಬೇಕಿದೆ. ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಮಾನವನ ಜೀವ ಅತ್ಯಂತ ಅಮೂಲ್ಯವಾದದ್ದು ಎಂಬ ಸಂದೇಶವನ್ನು ಕೂಡ ಇಸ್ಲಾಂ ಸಾರಿದೆ. ಸಹೋದರ ಧರ್ಮಿಯರ ಜೊತೆಗೂ ಬಕ್ರೀದ್ ಖುಷಿಯನ್ನು ಹಂಚಿಕೊಂಡು ಸಾಮರಸ್ಯ ಗಟ್ಟಿ ಗೊಳ್ಳಿಸಲು ಪಣ ತೊಡಬೇಕಿದೆ. ಲಾಕ್ ಡೌನ್ ಕೊರೋನ ನಮಗೆ ಕಲಿಸಿದ ಹಲವು ಪಾಠಗಳು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂಬ ಆಶಯದೊಂದಿಗೆ ಅತ್ಯಂತ ಸರಳವಾಗಿ ಬಕ್ರೀದ್ ಆಚರಿಸಲಾಯಿತು.
ಈದ್ ನಮಾಜನ್ನು ಸರಳವಾಗಿ ಆಚರಿಸಲಾಯಿತು. ಬಳಿಕ ಕಬರ್ ಝಿಯಾರತ್ತ್ ಹಾಗೂ ಮಾಖಾಂ ಝಿಯಾರತ್ತ್ ಮಾಡಿದರು. ಉಸ್ತಾದ್ ರಿಯಾಝ್ ಪೈಝಿ ನೂರುದ್ದಿನ್ ಅನ್ಸಾರಿ, ಟಿ ಯಂ ಶಹೀದ್ ತೆಕ್ಕೀಲ್, ಜಿ ಕೆ ಹಮೀದ್ ಗೂನಡ್ಕ, ಆಲಿ ಹಾಜಿ ರಝಾಕ್ ಮೊಟ್ಟೆಂಗಾರ್, ಇಬ್ರಾಯಿಂ ಮೇಟ್ರೂ, ಹನೀಪ್ ಟಿ ಬಿ, ಮುನೀರ್ ದಾರಿಮಿ, ಸಾಜಿದ್ ಅಝ್ಹರಿ ,ತಾಜು ಟರ್ಲಿ, ಕಾದರ್ ಮೊಟ್ಟೆಂಗಾರ್, ಹಕೀಂ ಪೇರಡ್ಕ, ಪಿ ಕೆ ಉಮ್ಮರ್ ಗೂನಡ್ಕ ,ರಝಾಖ್ ಹಾಜಿ ಅಡಿಮರಡ್ಕ ಮೊದಲಾದವರು ಭಾಗವಹಿಸಿದರು.

Sponsors

Related Articles

Back to top button