ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವಹಕ್ಕು ಘಟಕದ ಅಧ್ಯಕ್ಷ ಎ ಎಸ್ ಪೊನ್ನಣ್ಣ ಭೇಟಿ…

ಸುಳ್ಯ: ರಾಜ್ಯ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವಹಕ್ಕು ಘಟಕದ ಅಧ್ಯಕ್ಷ ಹಾಗು ಕೆಪಿಸಿಸಿ ವಕ್ತರರಾದ ಎ ಎಸ್ ಪೊನ್ನಣ್ಣ ರವರು ಪೆರಾಜೆ ಚೆಂಬು ಆಲೆಟ್ಟಿ ಗ್ರಾಮಗಳ ನಾಯಕರು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಪೂರ್ವತಯಾರಿ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಟಿ ಎಂ ಶಾಹಿದ್, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸೂರಜ್ ಹೊಸೂರು, ಕೊಡಗು ಜಿಲ್ಲಾ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ ಎಂ ಸಿ ಮನೋಹರ್,ಮದೆನಾಡು ಮಾಜಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಿ ಕೆ ಅಬುಶಾಲಿ, ಪೆರಾಜೆ ಗ್ರಾಮಪಂಚಾಯತ್ ಸದಸ್ಯರಾದ ಸುರೇಸ್ ಪೆರುಮುಂಡ , ಅಬೂಬಕರ್ ನಂಬರ್ ಮೂಲೆ,ಅಯ್ಯುಬ್ ಗೂನಡ್ಕ ಹಾಗು ಇನ್ನಿತರ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Sponsors

Related Articles

Back to top button