ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಉಪನ್ಯಾಸಕರ ಪ್ರೇರಣಾ ಕಾರ್ಯಕ್ರಮ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ 2 ದಿನಗಳ ಉಪನ್ಯಾಸಕರ ಪ್ರೇರಣಾ ಕಾರ್ಯಕ್ರಮ ‘ಪರಿಚಯ-2020’ನ್ನು ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು.
ಕಾಲೇಜಿಗೆ ನೂತನವಾಗಿ ಸೇರಿದ ಉಪನ್ಯಾಸಕರಿಗೆ ಕಾಲೇಜಿನ ಬಗ್ಗೆ, ಮಾತೃ ಸಂಸ್ಥೆಯ ಬಗ್ಗೆ, ಯಶಸ್ಸಿನ ಪ್ರಮುಖ ಲಕ್ಷಣಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡುವ ಬಗ್ಗೆ ಈ ಎರಡು ದಿನಗಳಲ್ಲಿ ತರಬೇತಿಯನ್ನು ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಎಂಬಿಎ ವಿಭಾಗ ಮುಖ್ಯಸ್ಥ ಡಾ.ಶೇಖರ್.ಎಸ್.ಅಯ್ಯರ್, ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ಮತ್ತು ಮೂಲ ವಿಜ್ಞಾನ ವಿಭಾಗದ ಪ್ರೊ. ಮಾಧವಿ ಪೈ ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾಲೇಜಿಗೆ ನೂತನವಾಗಿ ಸೇರಿದ ಸುಮಾರು 30 ಮಂದಿ ಪ್ರಾಧ್ಯಾಪಕರು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.

 

Related Articles

Leave a Reply

Your email address will not be published.

Back to top button