ಸುಳ್ಯ ಬ್ಯಾಡ್‌ಮಿಂಟನ್ ಅಸೋಸಿಯೇಶನ್ – ಕ್ರೀಡಾಪಟು ಸಂಶೀರ್‌ಗೆ ಅಜೀವ ಗೌರವ ಸದಸ್ಯತ್ವ…

ಸುಳ್ಯ: ಸುಳ್ಯ ಬ್ಯಾಡ್‌ಮಿಂಟನ್ ಅಸೋಸಿಯೇಶನ್ ವತಿಯಿಂದ ಸುಳ್ಯದ ಅಂತರಾಷ್ಟ್ರೀಯ ಕ್ರೀಡಾಪಟು ಸಂಶೀರ್‌ ಅವರಿಗೆ ಅಜೀವ ಗೌರವ ಸದಸ್ಯತ್ವವನ್ನು ನೀಡಲಾಯಿತು.
ಸುಳ್ಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಅಕ್ಷಯ್ ಕೆ.ಸಿ. ಅಜೀವ ಗೌರವ ಸದಸ್ಯತ್ವವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಜಿ ರಮೇಶ್ ಕೆ. ಭಟ್, ಉಪಾಧ್ಯಕ್ಷ ರಿಜ್ವಾನ್ ಜನತಾ, ಜತೆ ಖಜಾಂಜಿ ಗಣೇಶ್ ಆಳ್ವ, ಜತೆ ಕಾರ್ಯದರ್ಶಿ ಸತೀಶ್ ಕೆ.ಜಿ, ನಿರ್ದೇಶಕರಾದ ಮನೀಶ್ ಬಾಬು ಗೌಡ, ವಿಜಯ್ ಕುಮಾರ್, ನ್ಯಾಯವಾದಿ ಮಹೇಶ್, ಪ್ರಮೋದ್ ನಾಯರ್, ಸಫ್ವಾನ್ ಜನತಾ, ಅಬ್ದುಲ್ ರಹಿಮಾನ್ ಮೊಗರ್ಪಣೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button