ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ – ಕೋಡ್ ಮೀಟ್ 2023 ಕಾರ್ಯಕ್ರಮ…

ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅ. 27 ,28 ಮತ್ತು 29 ರಂದು ಕೋಡ್ ಮೀಟ್ 2023 ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಪ್ರಬಂಧಕರಾದ ಶ್ರೀ ರೋಹಿತ್ ಪೈ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಶ್ರೀಮತಿ. ಮಿತ್ರ ಎಸ್ ರಾವ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್, ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕೆ. ಜಿ., ವಿಶ್ವವಿದ್ಯಾಲಯದ ವೆಬ್ ಫ್ಲೋ ಕಮ್ಮ್ಯುನಿಟಿ ಮಾರ್ಗದರ್ಶಕರಾದ ಡಾ. ಶ್ರೀಮತಿ ಸುಶ್ಮಾ ಅಕ್ಕರಾಜು, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ರಂಜಿತ್ ಕೋಲ್ಕರ್ ಮತ್ತು ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಅಬ್ರಾರ್ ನವಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ವೆಬ್ ಫ್ಲೋ ಕಮ್ಮ್ಯುನಿಟಿ ಮಾರ್ಗದರ್ಶಕರಾದ ಡಾ. ಶ್ರೀಮತಿ ಸುಶ್ಮಾ ಅಕ್ಕರಾಜು ರವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು ಹಾಗೂ ಕೋಡ್ ಮೀಟ್ 2023 ಕಾರ್ಯಕ್ರಮದ ಧ್ಯೇಯ, ಉದ್ದೇಶ ಮತ್ತು ಉಪಯುಕ್ತತೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಇಂಜಿನಿಯರ್ ಶ್ರೀ ರೋಹಿತ್ ಪೈ ಯವರು ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಕಂಪ್ಯೂಟರ್ ಯಂತ್ರಾಂಶ, ಮಾಹಿತಿ ತಂತ್ರಜ್ಞಾನ ಮತ್ತು ಮನೋರಂಜನಾ ಮಾಧ್ಯಮ ಜಗತ್ತು ಅಭಿವೃದ್ಧಿ ಹೊಂದಿದ ಪರಿಯನ್ನು ವಿವರಿಸಿದರು ಹಾಗೂ ಪ್ರೋಗ್ರಾಮಿಂಗ್ ಕೋಡಿಂಗ್ ವಿಧಾನದ ಹಲವಾರು ಆಯಾಮಗಳ ಕುರಿತು ನೆರೆದ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಯಾವುದೇ ಕೆಲಸವಾಗಲಿ ಅದನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಮಾಡಬೇಕು, ಮೊಬೈಲ್ ಅಪ್ಲಿಕೇಶನ್ ಅನ್ನು ಎಲ್ಲರೂ ಸುಲಭವಾಗಿ ಬಳಸುವ ರೀತಿಯಲ್ಲಿ ಕೋಡಿಂಗ್ ಅನ್ನು ಮಾಡಬೇಕು, ನಿಮ್ಮ ಕೌಶಲ್ಯವನ್ನು ಸುಧಾರಿಸಿ, ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚು ಬಲಗೊಳಿಸಿ, ನಿಮ್ಮ ದೌರ್ಬಲ್ಯಗಳನ್ನು ಅಭಿವೃದ್ಧಿಪಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಸ್ಪೂರ್ತಿದಾಯಕ ಟೆಡ್ ವೀಡಿಯೊಗಳನ್ನು ವೀಕ್ಷಿಸಿ, ಮತ್ತು ಆನ್‌ಲೈನ್ ಮೂಲಕ ಪ್ರತೀ ದಿನ ಹೆಚ್ಚಿನ ತಂತ್ರಜ್ಞಾನವನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬದಲಾವಣೆ ಮಾತ್ರ ನಿರಂತರವಾಗಿರುತ್ತದೆ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಸದಾ ಹೊಂದಿಕೊಳ್ಳುವವರಾಗಿರಬೇಕು, ಜೀವನವು ಹಸಿರಲ್ಲ, ಎದುರಾಗುವ ಸವಾಲುಗಳನ್ನು ಸವಾಲಾಗಿ ಸ್ವೀಕರಿಸಿ ಎಂದು ಹೇಳಿದರು. ನೀವು ಕೊನೆಯ ಬಾರಿಗೆ ಯಾವುದನ್ನು ಮೊದಲ ಬಾರಿಗೆ ಮಾಡಿದ್ದೀರಿ ಎಂಬ ಪ್ರಶ್ನೆಯನ್ನು ನೀವು ನಿರಂತರವಾಗಿ ನಿಮ್ಮಲ್ಲಿ ಕೇಳಿಕೊಳ್ಳಬೇಕು, ಜೀವನದಲ್ಲಿ ನಿರ್ದಿಷ್ಟ ಗುರಿಗಳನ್ನು ಹೊಂದಿ ಮತ್ತು ಅದನ್ನು ಸಾಧಿಸಲು ಕೆಲಸ ಮಾಡಿ, ನಿಮ್ಮ ಜನರನ್ನು ಮತ್ತು ನಿಮ್ಮ ತಂಡದ ಸದಸ್ಯರನ್ನು ತಿಳಿದುಕೊಳ್ಳಿ, ಈ ಎಲ್ಲಾ ವಿಷಯಗಳು ನಿಮ್ಮನ್ನು ಯಶಸ್ವಿ ಮತ್ತು ಉತ್ತಮ ವೃತ್ತಿಪರ ವ್ಯಕ್ತಿಯಾಗಿ ರೂಪಾಂತರಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಶ್ರೀಮತಿ ಮಿತ್ರಾ ಎಸ್ ರಾವ್ ರವರು ಮಾತನಾಡಿ, ನಮ್ಮ ಮಕ್ಕಳು ಹಾಗೂ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿರುವ ಸಂಸ್ಥೆಗಳಿಗಳಲ್ಲಿ ಉತ್ತಮ ಸೇವೆಯನ್ನು ನೀಡುವುದರ ಮುಲಕ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಹೇಳಿದರು. ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್ ರವರು ಮಾತನಾಡಿ, ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಕೋಡಿಂಗ್ ಉತ್ಸವ ಹಾಗೂ ನಿರಂತರ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಡೆಯಲಿರುವ ಹ್ಯಾಕಥಾನ್ ಸ್ಪರ್ಧೆಯು ಸ್ಪರ್ಧಾಳುಗಳ ಬುದ್ಧಿಶಕ್ತಿ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಲಿದೆ ಎಂದು ಹೇಳಿದರು. ಕೋಡಿಂಗ್ ಎನ್ನುವುದು ಮನುಷ್ಯ ಮತ್ತು ಯಂತ್ರದ ನಡುವಿನ ಸಂಬಂಧ, ಮನುಷ್ಯ ಯಂತ್ರವಾಗಿದ್ದಾನೆ ಮತ್ತು ಯಂತ್ರ ಮನುಷ್ಯನಾಗಿದ್ದಾನೆ, ಪ್ರಸ್ತುತ ಸನ್ನಿವೇಶದಲ್ಲಿ ಕೃತಕ ಬುದ್ಧಿಮತ್ತೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ, ಎಲ್ಲಾ ವಿದ್ಯಾರ್ಥಿಗಳು ಈ ಕೋಡ್ ಫೆಸ್ಟ್‌ನ ಸದುಪಯೋಗವನ್ನು ಪಡೆದುಕೊಂಡು ತಮ್ಮ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಮಾತನಾಡಿ, ವಿದ್ಯಾರ್ಥಿಗಳು ಮಿನುಗುವ ತಾರೆಯಾಗಬೇಕು, ವೃತ್ತಿಪರ ವೃತ್ತಿಯಲ್ಲಿ ಕೌಶಲ್ಯ ಬಹಳ ಮುಖ್ಯ, ಸಮಸ್ಯೆಗಳಿಗೆ ಪರಿಹಾರಗಳನ್ನು ತ್ವರಿತವಾಗಿ ತಲುಪಲು ಕೌಶಲ್ಯಗಳು ಸಹಾಯ ಮಾಡುತ್ತವೆ ಎಂದು ಹೇಳಿದರು. ಇಂದು, ಎಲ್ಲಾ ಕ್ಷೇತ್ರಗಳಲ್ಲಿ ಕೋಡಿಂಗ್ ಬಹಳ ಮುಖ್ಯವಾಗಿದೆ, ಉತ್ತಮವಾಗಿ ಕೋಡಿಂಗ್ ಮಾಡುವುದರ ಮುಲಕ ಯಾವುದೇ ಕೆಲಸವನ್ನು ಸಹ ಸರಳವಾಗಿ ಮಾಡಬಹುದು, ಆದ್ದರಿಂದ ವಿದ್ಯಾರ್ಥಿಗಳು ತಾವು ಹೇಗೆ ಪರಿಣಿತರಾಗಬೇಕೆಂದು ಯೋಚಿಸಬೇಕು ಮತ್ತು ತಮ್ಮ ಜ್ಞಾನ – ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ಡಾ. ಥಾಮಸ್ ಪಿಂಟೋ ರವರು ಸ್ವಾಗತ ಭಾಷಣವನ್ನು ಮಾಡಿದರು.ಪ್ರೊ. ರಂಜಿತ್ ಕೋಲ್ಕರ್ ರವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಕುಮಾರಿ ಮಾಧುರಿ ಆಚಾರ್ಯ ಪ್ರಾರ್ಥನೆಯನ್ನು ಮಾಡಿದರು. ಪ್ರೊ. ವರ್ಷಾ ಬಂಗೇರ ರವರು ವಂದನಾರ್ಪಣೆ ಸಲ್ಲಿಸಿದರು.‌ ವಿದ್ಯಾರ್ಥಿಗಳಾದ ಸ್ಯಾಮ್ ಅವಿನ್ ಬಂಗೇರ, ವೈಷ್ಣವಿ ಶಣೈ ಮತ್ತು ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವ: ಪ್ರೊ.ಶ್ರೀನಾಥ್ ರಾವ್

Sponsors

Related Articles

Back to top button