ಮಾ.15 ಮತ್ತು 16- ಬ್ಯಾಂಕ್ ಮುಷ್ಕರ…

ನವದೆಹಲಿ:ಕೇಂದ್ರ ಸರ್ಕಾರವು ಈಗಾಗಲೇ ಎರಡು ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾಗಿದ್ದು, ಇದನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಮಾ. 15 ಮತ್ತು 16 ರಂದು ಬ್ಯಾಂಕ್ ನೌಕರರು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ತಿಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಪೈಕಿ ಎರಡು ಬ್ಯಾಂಕ್‌ಗಳು ಹಾಗೂ ಒಂದು ವಿಮಾ ಕಂಪನಿ ಖಾಸಗೀಕರಣಗೊಳಿಸುವುದಾಗಿ ವಿತ್ತ ಸಚಿವೆ ಬಜೆಟ್ ವೇಳೆ ತಿಳಿಸಿದ್ದರು. ಹೀಗಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಸೇರಿದಂತೆ 9 ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published.

Back to top button