ಮೇ.9 ರಿಂದ ಮೇ. 20 – ಬಿ.ಸಿ.ರೋಡಿನಲ್ಲಿ ಸರಣಿ ತಾಳಮದ್ದಳೆ…

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಡೆಯಲಿರುವ ಸರಣಿ ಯಕ್ಷಗಾನ ತಾಳಮದ್ದಳೆ ‘ರಾಮಾಯಣ ದರ್ಶನ’ ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು.
ಶ್ರೀ ಶಂಕರ ಸೇವಾ ಪ್ರತಿಷ್ಠಾನದ ಸಂಚಾಲಕ ಅನಾರು ಕೃಷ್ಣ ಶರ್ಮ , ಅಖಿಲ ಕರ್ನಾಟಕ ಹಿರಿಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್, ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇದರ ಅಧ್ಯಕ್ಷ ಪ್ರಶಾಂತ್ ಹೊಳ್ಳ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪ್ರಮುಖರಾದ ಜಯಾನಂದ ಪೆರಾಜೆ, ಕಾಂತಾಡಿಗುತ್ತು ಸೀತರಾಮ ಶೆಟ್ಟಿ , ಕೆ ಮೋಹನ್ ರಾವ್, ಮಹಾಲಿಂಗ ಭಟ್ , ರಾಜಮಣಿ ರಾಮಕುಂಜ ಮತ್ತಿತರರು ಉಪಸ್ಥಿತರಿದ್ದರು.
ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ದ್ವಾದಶ ಯಕ್ಷಾಂಜಲಿ ಹವ್ಯಾಸಿ ಕಲಾವಿದರ ಕೂಟದಿಂದ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರ ಬಿ.ಸಿ.ರೋಡಿನಲ್ಲಿ ತಾಳಮದ್ದಳೆ ,ಮೇ 9ರಿಂದ ಪ್ರತಿದಿನ ಅಪರಾಹ್ನ 4 ರಿಂದ ನಡೆಯಲಿದೆ.
ಮೇ.9 ‘ಶ್ರೀರಾಮ ಪಟ್ಟಾಭಿಷೇಕ’ ಪ್ರಸಿದ್ದಕಲಾವಿದರು, ಮೇ. 10 ‘ಭ್ರಾತೃ ಪ್ರೇಮ’ ಪಿ.ವಿ.ರಾವ್ ಸುರತ್ಕಲ್ ಮತ್ತು ಬಳಗ, ಮೇ.11 ‘ನಾಸಾಚ್ಛೇದನ’ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಸುರತ್ಕಲ್, ಮೇ.12 ‘ಮಾಯಾಮೃಗ’ ಶ್ರೀ ಮದವೂರ ವಿಘ್ನೇಶ ಕಲಾಸಂಘ ಗೇರುಕಟ್ಟೆ, ಮೇ 13 ‘ ಅಂತರಂಗ ದರ್ಶನ’ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು, ಮೇ.14 ರಂದು ‘ ವಾಲಿ ಮೋಕ್ಷ’ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ, ಮೇ.15 ‘ ಚೂಡಾಮಣಿ’ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಬಳಗ ಬೊಳುವಾರು ಪುತ್ತೂರು, ಮೇ. 16 ‘ಅಂಗದ ಸಂಧಾನ’ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು, ಮೇ.17 ‘ ಅತಿಕಾಯ ಮೋಕ್ಷ’ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು, ಮೇ.18 ‘ಮಾರಣಾದ್ವರ’ ಶ್ರವಣ ರಂಗ ಪ್ರತಿಷ್ಟಾನ ಸವಣೂರು, ಮೇ.19 ‘ರಾವಣ ವಧೆ’ ಜಿ.ಕೆ. ನಾವಡ ಬಳಗ ಬಾಯಾರು, ಮೇ.20 ‘ಮಾ ನಿಷಾದ’ ಜಿಲ್ಲಾ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

Related Articles

Back to top button