ಸುದ್ದಿ

ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ…

ಬಂಟ್ವಾಳ: ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗುತ್ತಿರುವ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಬ್ರಹ್ಮಕಲಶೋತ್ಸವದ ಸಿದ್ದತೆ ಪರಿಶೀಲಿಸಿದರು.
ಈ ದೇಗುಲಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮುಜರಾಯಿ ಇಲಾಖೆಯಿಂದ 8 ಲಕ್ಷ ರೂ ಅನುದಾನ ಒದಗಿಸಿ ದೇಗುಲದ ಸಂಪರ್ಕ ರಸ್ತೆಯನ್ನು 5 ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಿದ್ದಾರೆ. ನೀರಿನ ಅಭಾವ ತಲೆದೋರಿದಾಗ ದೇಗುಲಕ್ಕೆ ಕೊಳವೆಬಾವಿ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಿದ್ದೂ ಅಲ್ಲದೆ ವೈಯುಕ್ತಿಕವಾಗಿ ಒಂದು ಲಕ್ಷ ರೂ ದೇಣಿಗೆಯನ್ನು ನೀಡುವ ಮೂಲಕ ಜೀರ್ಣೋದ್ಧಾರದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.
ಈ ಸಂದರ್ಭದಲ್ಲಿ ದೇಗುಲದ ಮುಖ್ಯ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಭಕ್ತಾದಿಗಳು ಮನವಿ ಮಾಡಿದ್ದು, ತಕ್ಷಣವೇ ಸ್ಪಂದಿಸಿದ ಶಾಸಕರು ಅಧಿಕಾರಿಗಳಿಗೆ ಡಾಮಾರೀಕರಣಗೊಳಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಬೋಜರಾಜ ಶೆಟ್ಟಿ,
ಅಶೋಕ್ ಪಕ್ಕಳ, ರವಿರಾಮ, ವಿನೋದ್ ಸಾಲ್ಯಾನ್, ಸುಲೋಚನ ಜಿ.ಕೆ ಭಟ್, ದಿನೇಶ್ ದಂಬೇದಾರ್, ವಿಜಯ ರೈ, ಪುರುಷೋತ್ತಮ ಶೆಟ್ಟಿ, ಪ್ರಭಾಕರ್ ಶೆಟ್ಟಿ, ವಸಂತ ಶೆಟ್ಟಿ ಕೇದಿಗೆ, ಪದ್ಮನಾಭ ಬಂಡಾರಿ, ವಾಸು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button