ಪ್ರಸಿದ್ಧ ಕಲಾವಿದ ಮೋಹನ್ ಸೋನಾ ಇನ್ನಿಲ್ಲ…

ಸುಳ್ಯ: ನಾಡಿನ ಹೆಸರಾಂತ ಕಲಾವಿದ ಮೋಹನ್ ಸೋನಾ (64) ನಿನ್ನೆ ರಾತ್ರಿ ನಿಧನರಾಗಿದ್ದಾರೆ.ಅವರು ಕಳೆದ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಗೊಳಗಾಗಿದ್ದರು.
ವಿಟ್ಲ ಸಿ.ಪಿ.ಸಿ.ಆರ್.ಐ ನಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದ ಅವರು ಚಿತ್ರ ಕಲಾವಿದರಾಗಿ, ನಾಟಕಕಾರರಾಗಿ, ನಟರಾಗಿ, ನಿರ್ದೇಶಕರಾಗಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಅವರು ಚೋಮ, ನಾಳೆ ಯಾರಿಗೂ ಇಲ್ಲ, ತೆರೆಗಳಲ್ಲಿ ಅದ್ಭುತ ಅಭಿನಯ ತೋರಿದ್ದರು. ಅವರು ಕಲೆ, ಶಿಕ್ಷಣ, ರಂಗಭೂಮಿಯ ವಿಷಯದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಅವರು ಸೋಣಂಗೇರಿಯಲ್ಲಿ ಸಂಘಟಿಸಿದ್ದ ಬಯಲು ಚಿತ್ರಾಲಯ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
ಮೋಹನ್ ಸೋನಾ ಅವರು ಪತ್ನಿ, ಇಬ್ಬರು ಮಕ್ಕಳು, ಬಂಧುಗಳು ಹಾಗೂ ಅಪಾರ ಸ್ನೇಹಿತರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button