ಸುದ್ದಿ

‘ಮೋಕೆಡ್ ಒಂತೆ ಜೋಕೆ’ – ನಾಟಕ ಪ್ರದರ್ಶನ..

ಬಂಟ್ವಾಳ: ಮೋಕೆದ ಕಲಾವಿದರು ಬಂಟ್ವಾಳ ಮತ್ತು ತುಳುವ ಚಾವಡಿ ದಾಸಕೋಡಿ ಅರ್ಪಿಸಿದ ‘ಮೋಕೆಡ್ ಒಂತೆ ಜೋಕೆ’ ತುಳುನಾಟಕ ಬಿ.ಸಿ.ರೊಡಿನ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ತುಂಬಿದ ಪ್ರೇಕ್ಷಕರಿಂದ ಪ್ರದರ್ಶನಗೊಂಡಿತು.
ಮಕ್ಕಳ ಕಲಾ ಲೋಕದ ಮೋಹನ್‍ದಾಸ್ ಕೊಟ್ಟಾರಿ ರಚಿಸಿ ನಿರ್ದೆಶಿಸಿದ ಸಾಮಾಜಿಕ ನಾಟಕವು ಹಿರಿಯ/ಕಿರಿಯ ಕಲಾವಿದರು ಉತ್ತಮ ಅಭಿನಯ ನೀಡುವ ಮೂಲಕ ಪ್ರೇಕ್ಷಕರಿಗೆ ಮನೋರಂಜನೆ ನೀಡಿತು. ಸಂಕೀರ್ಣ ಬದುಕಿನ ಚಿತ್ರಣವನ್ನು ನಾಟಕದಲ್ಲಿ ಹಾಸ್ಯ ಮಿಶ್ರಿತವಾಗಿ ಉತ್ತಮ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಯಿತು. .ಶಿವಗಿರಿ ಕಲ್ಲಡ್ಕ ಸಂಗೀತ ನಿರ್ದೇಶನ ಮಾಡಿದ್ದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು. ಅತಿಥಿಗಳಾಗಿ ಆಶ್ವಿನಿ ಕುಮಾರ್ ರೈ, ಸುದರ್ಶನ್ ಜೈನ್, ಅಶೋಕ್ ಶೆಟ್ಟಿ ಸರಪಾಡಿ, ಡಾ. ವಿಶ್ವನಾಥ್ ನಾಯಕ್ ಪಾಣೆಮಂಗಳೂರು, ಜಯಾನಂದ ಪೆರಾಜೆ, ಲೋಕಯ್ಯ ಶೇರಾ, ನಾರಾಯಣ ಗೌಡ ಶೇಡಿಗುರಿ, ರಾಮಕೃಷ್ಣ ರಾವ್ ವಿಟ್ಲ , ಪ್ರಭಾಕರ ಪೈ ಜಕ್ರಿಬೆಟ್ಟು ಅತಿಥಿಗಳಾಗಿದ್ದರು.
ಮಂಜು ವಿಟ್ಲ ಸ್ವಾಗತಿಸಿ, ಸೌಮ್ಯ ಯಶವಂತ ಬಂಟ್ವಾಳ ನಿರೂಪಿಸಿ, ತುಳುವ ಚಾವಡಿ ಸ್ಥಾಪಕ ಅಧ್ಯಕ್ಷ ಬಿ.ಆರ್.ಕಬಕ ವಂದಿಸಿದರು.

Related Articles

Back to top button