ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನೆ…
ಮಂಗಳೂರು: ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ & ಮ್ಯಾನೇಜ್ ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಸಂಘದ (AEnCES) ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಅ.22 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಕುಂಟೆ ಮಾತನಾಡಿ, ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಇಂತಹ ಸಂಘದ ಎಲ್ಲಾ ಚಟುವಟಿಕಗಳಲ್ಲೂ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು, ಸಂಘದ ಮೂಲಕ ಹೆಚ್ಚು ಹೆಚ್ಚು ತಾಂತ್ರಿಕ ಚಟುವಟಿಕಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗ ಮುಖ್ಯಸ್ಥ ಡಾ. ಅಶ್ವತ್ಥ್ ರಾವ್, ಸಂಘದ ಶಿಕ್ಷಕ ಸಲಹೆಗಾರ ಪ್ರೊ.ಗುರುಸಿದ್ದಯ್ಯ ಹಿರೇಮಠ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಘ ಅಧ್ಯಕ್ಷ ಆದಿತ್ಯ ಎನ್ ಶೆಟ್ಟಿ ಸ್ವಾಗತಿಸಿ, ಖಜಾಂಜಿ ಪ್ರತ್ವಿಕ್ ಆರ್ ಅಮೀನ್ ವಂದಿಸಿದರು. ಕಾರ್ಯದರ್ಶಿ ದೀಪ್ತಿ ರೈ ಸಂಘದ ನಿಯೋಜಿತ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಧೃತಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.