ಸೋಮವಾರ- ದ.ಕ.12 ,ಉಡುಪಿ 14 ಹಾಗೂ ರಾಜ್ಯದಲ್ಲಿ 249 ಕೊರೊನ ಪಾಸಿಟಿವ್…

ಮಂಗಳೂರು: ಇಂದು(ಸೋಮವಾರ) ದ.ಕ ಜಿಲ್ಲೆಯಲ್ಲಿ 12 ,ಉಡುಪಿ ಜಿಲ್ಲೆಯಲ್ಲಿ 14 ಹಾಗೂ ರಾಜ್ಯದಲ್ಲಿ 249 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸದ್ಯ ರಾಜ್ಯದಲ್ಲಿ 3523 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಇಂದು 126 ಜನರಿಗೆ ಸೋಂಕು ದೃಢವಾಗಿದೆ. ಕಲಬುರಗಿಯಲ್ಲಿ 27, ವಿಜಯಪುರದಲ್ಲಿ 15, ದಾವಣಗೆರೆಯಲ್ಲಿ ಒಂಬತ್ತು, ಉತ್ತರ ಕನ್ನಡ ಮತ್ತು ಬಾಗಲಕೋಟೆಯಲ್ಲಿ ಆರು, ಬೀದರ್ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಐವರಿಗೆ, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ನಾಲ್ವರಿಗೆ, ರಾಮನಗರ ಜಿಲ್ಲೆಯಲ್ಲಿ ಮೂವರಿಗೆ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಡಗು ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಯಾದಗಿರಿ, ಮೈಸೂರು, ಚಿಕ್ಕಬಳ್ಳಾಪುರ, ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಓರ್ವರಿಗೆ ಕೊರೊನ ಸೋಂಕು ಪತ್ತೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button