ಸೋಮವಾರ – ದ.ಕ 233 , ಉಡುಪಿ 233 ಹಾಗೂ ರಾಜ್ಯದಲ್ಲಿ 7339 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಸೋಮವಾರ ) ದ.ಕ ಜಿಲ್ಲೆಯಲ್ಲಿ 233 , ಉಡುಪಿ 233 ಹಾಗೂ ರಾಜ್ಯದಲ್ಲಿ 7339 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 233 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20367 ಕ್ಕೆ ಏರಿಕೆಯಾಗಿದೆ. ಇಂದು 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಟ್ಟು 490 ಮಂದಿ ಬಲಿಯಾಗಿದ್ದಾರೆ.ಇಂದು 404 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 4371 ಸಕ್ರಿಯ ಪ್ರಕರಣಗಳಿವೆ.

ಉಡುಪಿ ಜಿಲ್ಲೆಯಲ್ಲಿ ಇಂದು 233 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 15624ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1366 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 122 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,145ಕ್ಕೆ ಏರಿಕೆಯಾಗಿದೆ.ಇಂದು 9,925 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 4,23,377ಕ್ಕೆ ಏರಿಕೆಯಾಗಿದೆ. 95,335 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button