ಸುದ್ದಿ

ಸೋಮವಾರ – ದ.ಕ 32 ,ಉಡುಪಿ 18 ಕೊರೋನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಸೋಮವಾರ) ದ.ಕ ಜಿಲ್ಲೆಯಲ್ಲಿ 32 ಹಾಗೂ ಉಡುಪಿ ಜಿಲ್ಲೆಯಲ್ಲಿ 18 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯ ಸೋಂಕಿತರ ಪೈಕಿ 21 ಪುರುಷರು ಮತ್ತು 11 ಮಹಿಳೆಯರಾಗಿದ್ದಾರೆ. 32 ಹೊಸ ರೋಗಿಗಳಲ್ಲಿ, ಒಬ್ಬರು ಅಂತರರಾಜ್ಯದಿಂದ ಮರಳಿದವರು, ಒಂಬತ್ತು ಜನರಿಗೆ ILI , ಆರು ಮಂದಿ ತೀವ್ರವಾದ ಉಸಿರಾಟದ ಕಾಯಿಲೆ (SAARI) ಮತ್ತು 12 ಮಂದಿಗೆ ಹಿಂದಿನ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ನಾಲ್ಕು ರೋಗಿಗಳ ಸಂಪರ್ಕ ಪತ್ತೆ ಪ್ರಕ್ರಿಯೆ ನಡೆಯುತ್ತಿದೆ.
ಉಡುಪಿ ಜಿಲ್ಲೆಯ ಸೋಂಕಿತರಲ್ಲಿ 5 ಮಂದಿ ಮಹಾರಾಷ್ಟ್ರದಿಂದ ವಾಪಾಸಾದವರಾಗಿದ್ದು, ಬೆಂಗಳೂರಿನಿಂದ ವಾಪಾಸಾದ ನಾಲ್ವರಲ್ಲಿ ಸೋಂಕು ದೃಢಗೊಂಡಿದೆ. ಅಲ್ಲದೆ ಉಡುಪಿಯ 9 ಜನರಲ್ಲಿ ಕೊರೋನಾ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ.

Related Articles

Leave a Reply

Your email address will not be published.

Back to top button