ಸೋಮವಾರ – ದ. ಕ. 34 , ಉಡುಪಿ 40 ಹಾಗೂ ರಾಜ್ಯದಲ್ಲಿ 1843 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಸೋಮವಾರ) ದ. ಕ ಜಿಲ್ಲೆಯಲ್ಲಿ 34 , ಉಡುಪಿ ಜಿಲ್ಲೆಯಲ್ಲಿ 40 ಹಾಗೂ ರಾಜ್ಯದಲ್ಲಿ 1843 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ. ಕ ಜಿಲ್ಲೆಯಲ್ಲಿ 17 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 9 ಮಂದಿಗೆ ILI , ಒಬ್ಬರಿಗೆ SAARI ಹಾಗೂ ಇನ್ನಿಬ್ಬರ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಉಡುಪಿ ಜಿಲ್ಲೆಯಲ್ಲಿ ಇಂದು 40 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1362 ಕ್ಕೆ ಏರಿಕೆಯಾಗಿದೆ.ಸೋಂಕಿತ 40 ಮಂದಿಯಲ್ಲಿ ಕೋಟದಲ್ಲಿರುವ ಪ್ರತಿಷ್ಠಿತ ಹೋಟೆಲ್ ನ ಸಿಬಂದಿಗಳು ಮತ್ತು ಪಕ್ಕದ ಅಂಗಡಿಯ ಮಾಲಿಕನ ಕುಟುಂಬಕ್ಕೂ ಕೂಡ ಕೊರೋನಾ ಪಾಸಿಟಿಸ್ ದೃಢಗೊಂಡಿದೆ.
ಇನ್ನು ರಾಜ್ಯದಲ್ಲಿಇಂದು ಒಟ್ಟು 1843 ಮಂದಿಗೆಕೊರೊನ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.ಕೊರೊನಾದಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 10 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು ಆರು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸಂಪರ್ಕದಿಂದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ನಾಲ್ವರು ವಿದೇಶ ಹಾಗೂ ಇಬ್ಬರು ಹೊರ ರಾಜ್ಯದಿಂದ ಬಂದವರಾಗಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button