ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಮೇದಿನಿ ಟೆಕ್ನಾಲಜೀಸ್ ಸಹಯೋಗದಲ್ಲಿ ನೈಪುಣ್ಯತೆಯ ಕೇಂದ್ರ ಸ್ಥಾಪನೆ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಹಾಗೂ ಮೇದಿನಿ ಟೆಕ್ನಾಲಜೀಸ್ ಬೆಂಗಳೂರು ಇದರ ಸಹಯೋಗದಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನೈಪುಣ್ಯತೆಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಸಂಶೋಧನಾ ನಿರತರಿಗೆ ಹಾಗೂ ವೃತ್ತಿಪರರಿಗೆ ಅನುಕೂಲವಾಗುವ ರೀತಿಯಲ್ಲಿ ತಂತ್ರಜ್ಞಾನಗಳ ಬದಲಾವಣೆ, ನೂತನ ಸಾಫ್ಟ್‍ವೇರ್‍ಗಳ ಬಳಕೆಯ ಬಗ್ಗೆ ಮಾಹಿತಿ, ವೃತ್ತಿಪರರಿಗೆ ಹೊಸ ಸಾಫ್ಟ್ ವೆರ್ ಗಳ ಮೂಲಕ ಮಾಡೆಲ್‍ಗಳ ರಚನೆ, ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್‍ಗಳನ್ನು ಮಾಡುವುದಕ್ಕೆ ಸೂಕ್ತ ಮಾರ್ಗದರ್ಶನ ಇವೇ ಮುಂತಾದ ವಿಷಯಗಳ ಬಗ್ಗೆ ಪರಸ್ಪರ ಸಹಕಾರದ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಮೇದಿನಿ ಟೆಕ್ನಾಲಜೀಸ್ ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿವಿಧ ವಲಯಗಳಲ್ಲಿ ಇಂತಹ ಕೇಂದ್ರವನ್ನು ತೆರೆದಿದ್ದು ಮಂಗಳೂರು ವಲಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನೈಪುಣ್ಯತೆಯ ಕೇಂದ್ರವನ್ನು ತೆರೆಯಲಾಗಿದೆ.
ವಿಭಾಗ ಮುಖ್ಯಸ್ಥರು ಹಾಗೂ ಉಪನ್ಯಾಸಕರ ಸಮ್ಮುಖದಲ್ಲಿ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಹಾಗೂ ಮೇದಿನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.

mou medhini

Sponsors

Related Articles

Back to top button