ಸುದ್ದಿ

ಮುಳ್ಳುoಜ ವೆಂಕಟೇಶ್ವರ ಭಟ್ ಪುನರಾಯ್ಕೆ…

ಬಂಟ್ವಾಳ: ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಮುಳ್ಳುoಜ ವೆಂಕಟೇಶ್ವರ ಭಟ್ ಪುನರಾಯ್ಕೆಯಾಗಿದ್ದಾರೆ.
ಅವರು ಕಳೆದ 18 ವರ್ಷಗಳಿಂದ ದೇವಸ್ಥಾನದ ಆಡಳಿತ ಸಮಿತಿಯ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಗಣಪತಿ ಭಟ್, ಪ್ರವೀಣ್ ಭಂಡಾರಿ, ವಿಠಲ್ ದಾಸ್ ,ಹರೀಶ್ ಬಂಗೇರ, ಬಾಬು ಪೂಜಾರಿ, ಪುರುಷೋತ್ತಮ ನಾಯಕ್, ಗೀತಾ, ರೇವತಿ ಆಯ್ಕೆಗೊಂಡಿದ್ದಾರೆ.
ರಾಧಾಕೃಷ್ಣ ಆಳ್ವ ಕೆ ಜಿ ರಾಮಕೃಷ್ಣ ಭಟ್, ಕಿಶನ್ ಶೇಣವ, ಸುರೇಶ್ ಬಂಗೇರ, ಭಾಸ್ಕರ, ಮನೋರಂಜನ್, ವೆಂಕಟ ಮೊದಲಾದವರು ಆಯ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Related Articles

Leave a Reply

Your email address will not be published.

Back to top button