ಸುದ್ದಿ

ಮುಖ್ಯಮಂತ್ರಿ, ಗೃಹ ಸಚಿವರ ಉಪಸ್ಥಿತಿಯಲ್ಲಿ ದ ಕ ಜಿಲ್ಲೆಯಲ್ಲಿ ಭೀಕರ ಕೊಲೆ, ರಾಜ್ಯದಲ್ಲಿ ಅರಾಜಕತೆ – ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಕ್ರೋಶ…

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆಗಳನ್ನು ಸರಕಾರ ಪ್ರಯೋಜಿತವಾಗಿ ಮಾಡಿದಂತೆ ಭಾಸವಾಗುತ್ತಿದ್ದು, ರಾಜ್ಯ ಸರಕಾರ ಸಂಪೂರ್ಣವಾಗಿ ಸತ್ತುಹೋಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಮಾಧಾನದಿಂದ ಬದುಕುವ ಜನರಿಗೆ ಕರ್ನಾಟಕ ಒಂದು ಅಶಾಂತಿಯ ರಾಜ್ಯವಾಗಿ ಮಾರ್ಪಟ್ಟಿದೆ. ಕಾನೂನೂ ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಇಲ್ಲಿ ಜನಪರ ಸರಕಾರ ಇಲ್ಲ ಒಂದು ಧರ್ಮದ ಪರವಾಗಿ ಸರಕಾರ ಇದೆ ಎಂದು ಮುಖ್ಯಮಂತ್ರಿ ಬಹಿರಂಗಪಡಿಸಿದ್ದಾರೆ. ಇಂತಹ ಮುಖ್ಯಮಂತ್ರಿ, ಗೃಹ ಸಚಿವರನ್ನು ಪಡೆದದ್ದು ಈ ರಾಜ್ಯದ ಜನರ ದುರ್ದೈವ. ಮಸೂದ್ ಹಾಗೂ ಫಾಸಿಲ್ ಅವರಿಗೆ ಸರಕಾರಕ್ಕೆ ತಲಾ ಇಪ್ಪತೈದು ಲಕ್ಷಗಳ ಪರಿಹಾರ ಘೋಷಿಸಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬೇಡ ಎಂದ ಅವರು ಯುವಕರು ಕೋಮು ಪ್ರಚೋದನೆಗೆ, ಉದ್ವೇಗಕ್ಕೆ ಒಳಗಾಗದೆ ಶಾಂತಿಯನ್ನು ಕಾಪಾಡಬೇಕು. ಭಾರತ ಮಾತೆಯ ಮೂರು ಮಕ್ಕಳನ್ನು ಕಳೆದ 7 ದಿವಸದಲ್ಲಿ ಜಿಲ್ಲೆಯಲ್ಲೇ ಕಳಕೊಂಡದ್ದನ್ನು ದೇಶಕ್ಕೆ ಕಾಣಲು ಸಾಧ್ಯವಾಗಿದ್ದು, ಇದು ಯಾರಿಗೂ ಶೋಭೆ ತರುವಂತದ್ದಲ್ಲ. ಮೂರೂ ಕುಟುಂಬಕ್ಕೆ ಪರಿಹಾರದ ಜೊತೆ ಸರಕಾರಿ ಉದ್ಯೋಗ ನೀಡುವಂತೆ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುವುದನ್ನು ಸರಿದೂಗಿಸಲು ಪರೋಕ್ಷವಾಗಿ ಈ ರೀತಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಮತ್ತು ಬಿಜೆಪಿಯ ಒಳ ಜಗಳ ದಿಂದ ಈ ರೀತಿ ಆಗುತ್ತಿರುವ ಸಂಶಯ ಕಾಡುತ್ತಿದ್ದು, ಸರಕಾರದ ಮುಖ್ಯಮಂತ್ರಿ, ಗೃಹ ಸಚಿವರು, ಜಿಲ್ಲೆಯ ಸಂಸತ್ ಸದಸ್ಯ ಹಾಗೂ ಶಾಸಕರು ಯಾಕೆ?. ಮಸೂದ್ ಹಾಗೂ ಫಾಸಿಲ್ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿಲ್ಲ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಸರಕಾರಕ್ಕೆ ಬದ್ಧತೆ ಇದ್ದರೆ ಸರ್ವ ಪಕ್ಷ ಹಾಗೂ ಧಾರ್ಮಿಕ ಮುಖಂಡರ ಸಭೆ ಕರೆದು ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಸರಕಾರ ವಿಸರ್ಜಿಸಿ ರಾಜ್ಯದ ಜನರ ಹಿತ ಕಾಪಾಡಿ ಎಂದು ಕೆಪಿಸಿಸಿಯ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಯ ಬೆಳವಣಿಗೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತಿದ್ದು ಹೊರ ರಾಜ್ಯ, ದೇಶಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡರಾದ ಟಿ ಎಂ ಶಾಹೀದ್ ತೆಕ್ಕಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Back to top button