ಸುದ್ದಿ

ನಲ್ಕೆಮಾರ್ ಅಂಗನವಾಡಿ ಪ್ರಾರಂಭೋತ್ಸವ…

ಬಂಟ್ವಾಳ: ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಶಿಕ್ಷಣದ ಆರಂಭ ಅಂಗನವಾಡಿ ಕೇಂದ್ರದಿಂದ ಶುರುವಾಗುತ್ತದೆ, ಶಿಕ್ಷಣದ ದೇಗುಲವಾಗಿರುವ ಅಂಗನವಾಡಿ ಕೇಂದ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಗಬೇಕು, ಅ ನಿಟ್ಟಿನಲ್ಲಿ ವ್ಯವಸ್ಥೆಗಳು ಪ್ರತಿ ಮಗುವಿಗೆ ಸಿಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ದ.ಕ.ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ , ಬಾಲವಿಕಾಸ ಸಮಿತಿ ನಲ್ಕೆಮಾರ್ ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂಗನವಾಡಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಲ್ಕೆಮಾರ್ ನಲ್ಲಿರುವ ಅಂಗನವಾಡಿ ಕೇಂದ್ರ ಕ್ಕೆ ಪೂರಕವಾದ ವಾತಾವರಣ ಇದೆ ಎಂದರು. ಕೊರೊನಾ ಮಹಾಮಾರಿ ತೊಲಗಲಿ, ಅಂಗನವಾಡಿಯಿಂದ ಕಾಲೇಜು ವರೆಗೆ ಶಿಕ್ಷಣಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ.ಎಸ್. ಆರ್.ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಉಪನಿರ್ದೇಶಕ ಪಾಪಬೋವಿ, ತಾ.ಪಂ.ಇ.ಒ.ರಾಜಣ್ಣ, ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕಾಯರ್ ಮಾರ್, ಸದಸ್ಯ ರಾದ
ಭಾರತಿ ಚೌಟ,ವಿಜಯಕುಮಾರ್, ಚಂದ್ರಾವತಿ, ಪ್ರಕಾಶ್, ಸೌಮ್ಯ, ಅಂಗನವಾಡಿ ಕಾರ್ಯಕರ್ತೆ ಭಾರತಿ , ಬಾಲವಿಕಾಶ ಸಮಿತಿ ಅಧ್ಯಕ್ಷೆ ನಿಶಾಲತಾ, ಹಾಗೂ ಸ್ತ್ರೀ ಶಕ್ತಿ ಸದಸ್ಯ ರು ಉಪಸ್ಥಿತರಿದ್ದರು.
ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಸ್ವಾಗತಿಸಿ, ಮೇಲ್ವಿಚಾರಕಿ ಗುಣವತಿ ವಂದಿಸಿದರು.

Related Articles

Back to top button