ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಕಳೆದ ಸಾಲಿನಲ್ಲಿ ರೂ.959 ಕೊಟಿ ವ್ಯವಹಾರ…

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 13,187 ಸ್ವಸಹಾಯ ಸಂಘಗಳಿದ್ದು 1,27,821 ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ರೂ.959 ಕೊಟಿ ವ್ಯವಹಾರ ನಡೆಸಿದ್ದು ಸದಸ್ಯರು ರೂ.136 ಕೋಟಿ ಉಳಿತಾಯ ಮಾಡಿರುತ್ತಾರೆ. ದ.ಕ. ಜಿಲ್ಲೆಯಲ್ಲಿ ಮುಂದಿನ ವರ್ಷ ರೂ.768 ಕೋಟಿ ಸಾಲ ವಿತರಣೆಯ ಗುರಿ ಇರಿಸಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ತಿಳಿಸಿದರು.
ಬಂಟ್ವಾಳದಲ್ಲಿ ಕಾರ್ಯಾಚರಿಸಲಿರುವ ನೂತನ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ 2019-20ರ ವಾರ್ಷಿಕ ಸಾಧನಾ ವರದಿಯನ್ನು ಅವರು ಪ್ರಕಟಿಸಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಉಪಸ್ಥಿತರಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ನಿರ್ದೇಶನದೊಂದಿಗೆ ದ.ಕ. ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಕಳೆದ 38 ವರ್ಷಗಳಿಂದ ಯೋಜನೆಯು ಸ್ವ ಸಹಾಯ ಸಂಘಗಳ ಪರಿಕಲ್ಪನೆ, ಸ್ವ ಉದ್ಯೋಗಗಳಿಗೆ ಪ್ರೇರಣೆ, ಬ್ಯಾಂಕಿನ ವ್ಯವಹಾರದ ಬಗ್ಗೆ ಸದಸ್ಯರಿಗೆ ಮಾಹಿತಿ, ರೈತರಿಗೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರಗತಿಬಂಧು ಸಂಘಟನೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೆ ಸಮುದಾಯದ ಅಭಿವೃದ್ಧಿ ಪೂರಕವಾಗಿ ಮೂಲಭೂತ ಸೌಕರ್ಯಗಳ ಒದಗಣೆ ಮತ್ತು ಅನುಷ್ಠಾನದ ಪ್ರೇರಣೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
8,587 ಪ್ರಗತಿ ಬಂಧು ಪ್ರಗತಿ ಬಂಧು ಮತ್ತು ಜಂಟಿ ಬಾಧ್ಯತಾ ಗುಂಪುಗಳಿದ್ದು 50,300 ಸದಸ್ಯರುಗಳನ್ನು ಹೊಂದಿದೆ. 748 ಒಕ್ಕೂಟಗಳಲ್ಲಿ 461 ಕೃಷಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು 22,530 ಮಂದಿ ಭಾಗವಹಿಸಿದ್ದಾರೆ. ಕೃಷಿ ಅಧ್ಯಯನ ಪ್ರವಾಸ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ, ತಾಂತ್ರಿಕ ಮಾಹಿತಿ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ ಕಾರ್ಯಕ್ರಮ ನಡೆಸಲಾಗಿದೆ.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ರೂ. 91.30 ಲಕ್ಷ ಅನುದಾನ ನೀಡಲಾಗಿದೆ. 35,204 ಕುಟಂಬಗಳು ನಿರಂತರ ಪ್ರಗತಿ ಪತ್ರಿಕೆಯ ಚಂದದಾರರಾಗಿದ್ದಾರೆ. ಜನಜಾಗೃತಿ ಕಾರ್ಯಕ್ರಮದಲ್ಲಿ ದುಶ್ಚಟಮುಕ್ತ ಶಿಬಿರದಲ್ಲಿ19731 ಮಂದಿ ಭಾಗವಹಿಸಿದ್ದು 715 ನವಜೀವನ ಸಮಿತಿಗಳಲ್ಲಿ 8382 ಸದಸ್ಯರಿದ್ದಾರೆ. 71 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಗಿದ್ದು 9181 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸುಜ್ಷಾನ ನಿಧಿ ಕಾರ್ಯಕ್ರಮ, ನಿರ್ಗತಿಕರ ಮಾಸಾಶನ, ಹಸಿರು ಇಂಧನ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕೃಷಿ ಕಾರ್ಯಕ್ರಮಗಳಿಗೆ ಅನುದಾನ ವಿತರಣೆ, ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ 2,10,497 ಸದಸ್ಯರು ನೋದಾಯಿಸಲ್ಪಟ್ಟಿದ್ದಾರೆ.
ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಅವರು ವಿವಿರ ನೀಡಿದರು.

Sponsors

Related Articles

Leave a Reply

Your email address will not be published. Required fields are marked *

Back to top button