ನೆತ್ತರಕೆರೆ -“ಆಟಿಡೊಂಜಿ ಗಮ್ಮತ್” ಆಷಾಡ ಮಾಸದ ವಿಶೇಷ ಕಾರ್ಯಕ್ರಮ…
ವಿವಿಧ ಸ್ಪರ್ಧೆಗಳು, ಸುಮಾರು 36 ಬಗೆಯ ವಿಶೇಷ ತಿಂಡಿ ತಿನಿಸುಗಳು...
ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್ ಎಂಬ ಆಷಾಡ ಮಾಸದ ವಿಶೇಷ ಕಾರ್ಯಕ್ರಮವು ಜು. 31ರಂದು ನೆತ್ತರಕೆರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯ ವೆಂಕಟ್ ರಾವ್ ಇವರು ನೆರವೇರಿಸಿದರು.ಗೀತಾ ಪದ್ಮನಾಭ ಶೆಟ್ಟಿ ಪುಂಚಮೆ ಇವರು ಭಾರತ ಮಾತೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಊರಿನ ಹಾಗೂ ಮಾತೃ ಮಂಡಳಿಯ ಸದಸ್ಯರಿಗೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ವಿವಿಧ ರೀತಿಯ ಆಟೋಟ ಸ್ಪರ್ಧೆಗಳಾದ, ತುಳು ಗಾದೆ, ಪದ ಬಂಡಿ, ಅಂತ್ಯಾಕ್ಷರಿ, ತುಳುಪಾರ್ದನ, ತುಳು ಗೀತೆಗಳು, ಚೆನ್ನಮಣಿ ಆಟ ಹಾಗೂ ಆಟಿದ ತಿಂಗಳು ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ನಡೆಯಿತು.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಅಮಿತಾ ವಿಶ್ವನಾಥ ಪಚಿನಡ್ಕ ವಹಿಸಿದ್ದರು, ವೇದಿಕೆಯಲ್ಲಿ ನೆತ್ತರಕೆರೆ ಶಾಲೆಯ ಶಿಕ್ಷಕಿಯಾದ ಮೋಹಿನಿ, ಶಾಂತಿ, ಸಹಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಮಾತ್ರ ಮಂಡಳಿಯ ಸಂಚಾಲಕರಾದ ಲಲಿತಾ ಸುಂದರ್, ಅಧ್ಯಕ್ಷರಾದ ಮಾಲತಿ ಚಂದ್ರಹಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಬಲಿಕ ಸಹ ಭೋಜನ ನಡೆಯಿತು. ಜಯಂತಿ ವಿಶ್ವನಾಥ್ ಹಾಗೂ ಕುಮಾರಿ ಶ್ರಾವ್ಯ ಇವರು ಸ್ವಾಗತಿಸಿದರು.ಸವಿತಾ ಪ್ರಭಾಕರ್ ಹಾಗೂ ಗೀತಾ ರವೀಂದ್ರ ಧನ್ಯವಾದ ಗೈದರು. ಕುಮಾರಿ ಅಶ್ವಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ನೇತ್ರಾವತಿ ಮಾತೃ ಮಂಡಳಿಯ ಸದಸ್ಯರು ತಮ್ಮ ಮನೆಯಲ್ಲಿಯೇ ತಯಾರಿಸಿದಂತಹ ವಿವಿಧ ಬಗೆಯ ಸುಮಾರು 36 ಬಗೆಯ ಆಷಾಡ ಮಾಸದ ವಿಶೇಷ ತಿನಿಸುಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಸಹ ಭೋಜನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನವೋದಯ ಮಿತ್ರ ಕಲಾ ವೃಂದದ ಗೌರವಾಧ್ಯಕ್ಷ ಪಿ ಸುಬ್ರಹ್ಮಣ್ಯರಾವ್, ಸಂಚಾಲಕ ದಾಮೋದರ ನೆತ್ತರಕೆರೆ, ಅಧ್ಯಕ್ಷ ಸಂತೋಷ್ ಕುಮಾರ್ , ಉಪಾಧ್ಯಕ್ಷ ಉಮೇಶ್ ಎನ್,ಹಿಂ. ಜಾ. ವೇ. ಜಿಲ್ಲಾಧ್ಯಕ್ಷ ಜಗದೀಶ್ ಬಂಗೇರ , ಆಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಿ. ಸುರೇಶ್ ಭಂಡಾರಿ ಅರ್ಬಿ,ಕಾರ್ಯದರ್ಶಿ ಶ್ರೀಧರ್, ಮಾತೃ ಮಂಡಳಿ ಉಪಾಧ್ಯಕ್ಷೆ ಸುಶೀಲ ಶೇಖರ್, ಮತ್ತಿತರರು ಉಪಸ್ಥಿತರಿದ್ದರು.