ಸುದ್ದಿ

ನೆತ್ತರಕೆರೆ – ನವೋದಯ ಮಿತ್ರ ಕಲಾ ವೃಂದ (ರಿ) ಆಶ್ರಯದಲ್ಲಿ ರಕ್ತದಾನ ಶಿಬಿರ…

ಬಂಟ್ವಾಳ: ಸೇವಾ ಭಾರತಿ ಬಂಟ್ವಾಳ ತಾಲೂಕು, ನವೋದಯ ಮಿತ್ರ ಕಲಾ ವೃಂದ (ರಿ)ಮತ್ತು ನೇತ್ರಾವತಿ ಮಾತೃ ಮಂಡಳಿ ಇದರ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವು ಜು. 24ರಂದು ಆದಿತ್ಯವಾರ ಬೆಳಿಗ್ಗೆ ನೆತ್ತರಕೆರೆಯಲ್ಲಿ ಜರುಗಿತು.
ಅಮ್ಮುಂಜೆ ಗ್ರಾ.ಪಂ. ಸದಸ್ಯರಾದ, ರಾಧಾಕೃಷ್ಣ ತಂತ್ರಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಹಿಂ.ಜಾ.ವೇ ಪುತ್ತೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಬಂಗೇರ, ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಲಡ್ ಬ್ಯಾಂಕ್ ಪ್ರಮುಖರಾದ ರಾಘವೇಂದ್ರ ರಕ್ತದಾನದ ಬಗ್ಗೆ ಮಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತೀಶ್ ಕುಂಪಲ,ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ರಾಜೀವಿ, ಕೆ.ಎಮ್.ಸಿ,ಮೆಡಿಕಲ್ ಆಫೀಸರ್ ಡಾ.ಅಕ್ಷಯಾ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್, ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಸುರೇಶ್ ಭಂಡಾರಿ ಆರ್ಭಿ,ಕಳ್ಳಿಗೆ ಗ್ರಾ.ಪಂ ಉಪಾಧ್ಯಕ್ಷರಾದ ದಾಮೋದರ ನೆತ್ತರಕೆರೆ,ಹಿಂ ವಿಠ್ಠಲ್ ಸಾಲಿಯಾನ್, ನ. ಮಿ ಕ ವೃಂದ ಅಧ್ಯಕ್ಷ ರಾದ ಸಂತೋಷ್ ಕುಮಾರ್, ಭಾಸ್ಕರ ಕುಲಾಲ್, ಜಗದೀಶ ನೆತ್ತರಕೆರೆ, ಸುರೇಶ ಕುಲಾಲ್,ಮಾತೃ ಮಂಡಳಿಯ ಅಧ್ಯಕ್ಷೆ ಮಾಲತಿ ಚಂದ್ರಹಾಸ ಮತ್ತು ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಮಾರು 87ಜನ ರಕ್ತ ದಾನ ಮಾಡಿದರು, ಕಾರ್ಯದರ್ಶಿ ಶ್ರೀಧರ್ ಹೆಚ್ ಸ್ವಾಗತಿಸಿ, ಧನ್ಯವಾದವಿತ್ತರು.

Related Articles

Back to top button