ಡಿಸೆಂಬರ್ 4 – ಬೆಂಗಳೂರಲ್ಲಿ NRI ಗ್ಲೋಬಲ್ಮೀಟ್…
ಬೆಂಗಳೂರು: ಇಂಡೋ ಅರಬ್ ಸಮಲೋಚನಾ ಒಕ್ಕೂಟ ( IACC ) ಟ್ರಸ್ಟ್ ವತಿಯಿಂದ ಬೆಂಗಳೂರಿನ ಲೆಮನ್ ಟ್ರಿ ಪ್ರೀಮಿಯರ್ ಪಂಚತಾರ ಹೋಟೆಲ್ ನಲ್ಲಿ ಡಿ. 4 ರಂದು ಗ್ಲೋಬಲ್ ಮೀಟ್, ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರ ಸಂಕೀರ್ಣ ನಡೆಯಲಿದೆ.
ಸಮಾರಂಭವನ್ನು ಗೋವಾ ರಾಜ್ಯಪಾಲ ಪಿ. ಎನ್. ಶ್ರೀಧರ್ ಪಿಳ್ಳೈ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸಂಸತ್ ಸದಸ್ಯ ನಾಸಿರ್ ಹುಸೈನ್, ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ , ಒಕ್ಕೂಟದ ಅಧ್ಯಕ್ಷ ಎಂ. ವಿ. ಕುಂಞಮು, ಎಂ. ಕೆ. ನೌಶಾದ್, ಸಾದಿಕ್ ಅಹ್ಮದ್, ವರ್ಗೀಸ್ ಮ್ಯಾಥ್ಯಿವ್ಯು ಮ್ಯಾತ್ಯು , ಅಥಿಕ್ ಅಹಮ್ಮದ್ ಮೊದಲಾದವರು ಆಗಮಿಸಲಿದ್ದಾರೆ.
ಸಂಜೆ 6 ಗಂಟೆಗೆ ಸಾಗರೋತ್ತರ ಭಾರತೀಯರ ಪುನರ್ವಸತಿ ಬಗ್ಗೆ ರಾಷ್ಟಮಟ್ಟದ ವಿಚಾರ ಸಂಕೀರ್ಣ ನಡೆಯಲಿದ್ದು , ಇದರ ಅಧ್ಯಕ್ಷತೆಯನ್ನು IACC ಬೆಂಗಳೂರು ಚಾಪ್ಟರ್ ಇದರ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ. ಸಿ. ಜಾಫರ್ IAS , ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೋಲೀಸ್ ಅಧಿಕಾರಿ ಎಮ್. ಎನ್. ಕೃಷ್ಣಮೂರ್ತಿ IPS, ಕಾಸರಗೋಡು ಮುನ್ಸಿಪಾಲಿಟಿ ಚೇಯರ್ ಮ್ಯಾನ್ ಟಿ. ಇ. ಅಬ್ದುಲ್ಲ, ಡಾ| ಪ್ರಿಯ ಆದರ್ಶ ಲಾಲ್, ಪ್ರೋ| ಮೊಹಮ್ಮದ್ ಹಸನ್, ಸುನಿಲ್ ವಿಜಯನ್ ಮೊದಲಾದವರು ಭಾಗವಹಿಸಲಿದ್ದಾರೆ. ಮತ್ತು ಈ ವಿಚಾರ ಸಂಕೀರ್ಣದಲ್ಲಿ ಕೋವಿಡ್ ಸಂದರ್ಭ ವಿದೇಶದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಮತ್ತು ಪುನರ್ವಸತಿ, ವ್ಯಾಪಾರ ಉದ್ದಿಮೆಗಳನ್ನು ನಡೆಸಲು ಬಡ್ಡಿರಹಿತ ಸಾಲ ಸೌಲಭ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಒಕ್ಕೂಟದ ಬೆಂಗಳೂರು ವಿಭಾಗದ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ತಿಳಿಸಿರುತ್ತಾರೆ.