ಸುದ್ದಿ

SKSSF ಕಲ್ಲುಗುಂಡಿ ಇದರ ವತಿಯಿಂದ ಹಾಗೂ ಮರ್ಹೂಂ ಸಯ್ಯದ್ ಫಖ್ರುದ್ದೀನ್ ತಂಙಳ್ ಮತ್ತು ಚೇಲಕ್ಕಾಡ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ…

ಸುಳ್ಯ: ಕಲ್ಲುಗುಂಡಿ ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮರ್ಹೂಂ ಶೈಖುನಾ ಪಕ್ರುದ್ದೀನ್ ತಂಙಳ್ ಹಾಗೂ ಶೈಖುನಾ ಚೇಲಕ್ಕಾಡ್ ಉಸ್ತಾದ್ ರವರ ಅನುಸ್ಮರಣೆ ಕಾರ್ಯಕ್ರಮ ಸೆ. 9 ರಂದು ಕಲ್ಲುಗುಂಡಿಯ ಸಮಸ್ತ ಕಾರ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು SKSSF ಕಲ್ಲುಗುಂಡಿ ಶಾಖೆ ಇದರ ಅಧ್ಯಕ್ಷರಾದ ನಿಜಾಮ್ ಎಸ್ ಎ ವಹಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಬಹು| ಝೈನುದ್ದೀನ್ ಯಮಾನಿ (ಖತೀಬರು, ಜುಮಾ ಮಸೀದಿ ಬಿಳಗುಳ, ಮೂಡಿಗೆರೆ ) ಕಾರ್ಯಕ್ರಮದ ನೇತೃತ್ವ ಹಾಗೂ ದುಆ ವನ್ನು, ಬಹು|ಸಯ್ಯದ್ NPM ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ನಿರ್ವಹಿಸಿದರು.
ಕಾರ್ಯಕ್ರಮದ ಅನುಸ್ಮರಣಾ ಭಾಷಣವನ್ನು ಖಾಸಿಂ ದಾರಿಮಿ ಸವಣೂರು ನಿರ್ವಹಿಸಿದರು. ಬಹು |ರಿಯಾಝ್ ಫೈಝಿ ಎಮ್ಮೆಮ್ಮಾಡು, ಹಾಜಿ ಅಬ್ಬಾಸ್ ಸೆಂಟ್ಯಾರು, ಹಮೀದ್ ಜಿ ಕೆ, ಎಸ್ ಅಲಿ ಹಾಜಿ,ತಾಜ್ ಮಹಮ್ಮದ್, ಇಬ್ರಾಹೀಮ್ ಎ ಕೆ, ಅಬ್ದುಲ್ ರಝಕ್,ಹಾಜಿ ಅಬ್ದುಲ್ ಕೊಪ್ಪತಕಜೆ, ಎಸ್ ಕೆ ಹನೀಫ್, ಅಬೂಸ್ವಾಲಿ ಗೂನಡ್ಕ, ಶೌಹಾದ್ ಗೂನಡ್ಕ,ಸಾಜಿದ್ ಅಝ್ಹರಿ, ರಫೀಕ್ ಕೆ.ಎಂ, ರಝಾಕ್ ಸೂಪರ್, ಕಿಫಾಯತುಲ್ಲಾ,ರಶೀದ್ ಬಾಲೆಂಬಿ,ಹಸ್ಸನ್ ಚಟ್ಟೆಕಲ್ಲು, ಉಮ್ಮರ್ ಚಟ್ಟೆಕಲ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯದರ್ಶಿ ಇರ್ಷಾದ್ ಸಂಪಾಜೆ ಸ್ವಾಗತಿಸಿದರು.

Related Articles

Back to top button