ಈರುಳ್ಳಿ ಬಜ್ಜಿ…..

ಈರುಳ್ಳಿ ಬಜ್ಜಿ ತಯಾರಿಸುವ ವಿಧಾನ:
ಈರುಳ್ಳಿಯನ್ನು ಉದ್ದನೆಯ ತೆಳುವಾದ ಹೋಳುಗಳಾಗಿ ಕತ್ತರಿಸಬೇಕು. ನಂತರ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಮೆಣಸಿನ ಹುಡಿ, ಸ್ವಲ್ಪ ಅರಶಿನ ಹುಡಿ, ಒಂದು ಚಿಟಿಕೆ ಇಂಗು, ಸ್ವಲ್ಪ ಜೀರಿಗೆ ಹುಡಿ, ಸ್ವಲ್ಪ ಓಂ ಕಾಳು ಬೆರೆಸಬೇಕು.
ಮೊದಲು ನೀರನ್ನು ಸೇರಿಸದೆ ಒಂದು ಪಾತ್ರೆಯಲ್ಲಿ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ನಂತರ ಕಡ್ಲೆ ಹುಡಿಯೊಂದಿಗೆ ಈ ಮಿಶ್ರಣವನ್ನು ಗಟ್ಟಿಯಾಗಿ ಬೆರೆಸಬೇಕು. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಬಳಸಿರಿ.

ನಂತರ ಮಧ್ಯಮ ಶಾಖದಲ್ಲಿ ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ, ಕಡ್ಲೆ ಹುಡಿಯೊಂದಿಗೆ ಈಗಾಗಲೇ ತಯಾರಿಸಿದ ಮಿಶ್ರಣವನ್ನು ಉಂಡೆಯಾಗಿ ಹಾಕಿ, ಸರಿಯಾದ ಉರಿಯಲ್ಲಿ ಹೊಂಬಣ್ಣ/ಕಂದು ಬಣ್ಣ ಬರುವವರೆಗೂ ಕಾಯಿಸಿ.
ಬರಹ: ಶ್ರೀಮತಿ ರಶ್ಮಿ ಪಿ.ಸಿ

 

Exit mobile version