ಸುದ್ದಿ

ಕೆನರಾ ಬ್ಯಾಂಕ್ ಪ್ರತಿನಿಧಿಗಳ ಪಾರ್ಲಿಮೆಂಟರಿ ಕಮಿಟಿ ಮೀಟ್ – ‘ಪ್ರಮೀಳಾರ್ಜುನ’ ಆಂಗ್ಲ ಯಕ್ಷಗಾನ ಪ್ರದರ್ಶನ…

ಮಂಗಳೂರು : ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಆಶ್ರಯದಲ್ಲಿ ರಾಜ್ಯಸಭಾ ಸದಸ್ಯರನ್ನೊಳಗೊಂಡ ‘ಪಾರ್ಲಿಮೆಂಟರಿ ಕಮಿಟಿ ಮೀಟ್’ ನಗರದ ಓಶಿಯನ್ ಪರ್ಲ್‌ ಹೋಟೆಲ್ ನಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಕರಾವಳಿಯ ಯಕ್ಷ ಕಲೆಯನ್ನು ಪ್ರತಿನಿಧಿಗಳಿಗೆ ಪರಿಚಯಿಸುವ ಸಲುವಾಗಿ ಆಂಗ್ಲ ಭಾಷೆಯಲ್ಲಿ ‘ಪ್ರಮೀಳಾರ್ಜುನ’ (The Battle Of Prameelarjuna) ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.
ಹಿಮ್ಮೇಳದಲ್ಲಿ ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್ , ಚೆಂಡೆ – ಮದ್ದಲೆಗಳಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್ ಕಾವೂರು ಮತ್ತು ಚಕ್ರತಾಳದಲ್ಲಿ ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ( ಅರ್ಜುನ ); ರವಿ ಅಲೆವೂರಾಯ ವರ್ಕಾಡಿ (ಪ್ರಮೀಳೆ) ಮತ್ತು ಡಾ.ದಿನಕರ ಎಸ್.ಪಚ್ವನಾಡಿ (ಅನುಸಾಲ್ವ) ಪಾತ್ರವಹಿಸಿದ್ದರು.
ಕೆನರಾ ಬ್ಯಾಂಕ್ ಚೇರ್ಮನ್ ಹಾಗೂ ಕೇಂದ್ರ ಸಚಿವರಾದ ಬಿಹಾರದ ಅಖಿಲೇಶ್ ಪ್ರಸಾದ್ ಸಿಂಗ್ ಹಾಗೂ ರಾಜ್ಯಸಭಾ ಸದಸ್ಯರಾದ ವಂದನಾ ಚವಾನ್, ಅಮರ್ ಪಟ್ನಾಯಕ್, ಜೋಶ್ ಕೆ. ಮಣಿ, ತ್ರಿಚಿ ಶಿವಾ ಮೊದಲಾದವರು ಯಕ್ಷಗಾನವನ್ನು ವೀಕ್ಷಿಸಿ ಕಲಾವಿದರನ್ನು ಅಭಿನಂದಿಸಿದರು.

Related Articles

Back to top button